ಬೆಂಗಳೂರಿನ ಅಪಾರ್ಟ್ಮೆಂಟ್‌ನೊ0ದರ ಪಾರ್ಕಿಂಗ್ ಲಾಟ್‌ನಲ್ಲಿ ನಾರಾಯಣಸ್ವಾಮಿ(70) ಎಂಬುವರ ಕೊಲೆ ಆಗಿತ್ತು.
ಪುತ್ರ ಮಣಿಕಂಠ ಶಿವಕುಮಾರ್, ನವೀನ್ ಕುಮಾರ್‌ಗೆ ಮುಂಗಡವಾಗಿ 1 ಲಕ್ಷ ನೀಡಿ ತನ್ನ ತಂದೆಯ ಕೊಲೆ ಮಾಡಲು 1 ಕೋಟಿ ರೂ. ಸುಪಾರಿ ನೀಡಿದ್ದ. ಅದರಂತೆಯೇ ಇಬ್ಬರು ದುಷ್ಕರ್ಮಿಗಳು ನಾರಾಯಣಸ್ವಾಮಿಯನ್ನ ಕೊಂದಿದ್ದರು. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಕAಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದನು. ಬಳಿಕ ಜೈಲಿನಿಂದ ಹೊರಬಂದು ಎರಡನೇ ವಿವಾಹವಾಗಿದ್ದು, ಆತನಿಗೆ ಒಂದು ಹೆಣ್ಣು ಮಗಳಿದ್ದಳು. ಆದರೆ ಮಣಿಕಂಠ ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬAಧ ಹೊಂದಿದ್ದನು. ಈ ವಿಚಾರ ಗೊತ್ತಾಗಿ ಎರಡನೇ ಪತ್ನಿ ಪತಿಯಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಳು.
ಆದರೆ ವಿಚ್ಛೇದನ ಕೊಡುವುದು ಬೇಡ ಎಂದು ಮಾವ ನಾರಾಯಣಸ್ವಾಮಿ ಕೇಳಿಕೊಂಡಿದ್ದನು. ಆದರು ಇದಕ್ಕೆ ಸೊಸೆ ಒಪ್ಪಲಿಲ್ಲ. ಹೀಗಾಗಿ ವಿಚ್ಛೇದನ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟವಾಗಬಹುದು, ಅವರ ಜೀವನ ನಿರ್ವಹಣೆ ಕಷ್ಟ ಆಗುತ್ತೆ ಎಂದು ಸೈಟ್‌ವೊಂದನ್ನ ಅವರ ಹೆಸರಿಗೆ ಮಾಡಲು ಮಾವ ನಾರಾಯಣಸ್ವಾಮಿ ಮುಂದಾಗಿದ್ದರು.
ಹೀಗಾಗಿ ಸೊಸೆ ಹಾಗೂ ಮೊಮ್ಮಗಳ ಹೆಸರಿಗೆ ಸೈಟ್ ರಿಜಿಸ್ಟ್ರೇಷನ್ ಮಾಡಲು ನಾರಾಯಣಸ್ವಾಮಿ ಮುಂದಾಗಿದ್ದರು. ಆದರೆ ಇದು ಮಣಿಕಂಠನಿಗೆ ಇಷ್ಟವಿಲ್ಲದ ಕಾರಣ , ತಂದೆ ಕೊಲೆಗೆ ಮಗ ಮಣಿಕಂಠ ಸುಪಾರಿ ನೀಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನೂ ಈ ಕೊಲೆಗಾರ ಮಣಿಕಂಠ ಮೂರು ನಾಲ್ಕು ತಿಂಗಳ ಹಿಂದೆ ಎರಡನೇ ಪತ್ನಿಗೂ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದು, ಆದರೆ ಪೊಲೀಸರು ಕೇಸ್ ದಾಖಲಿಕೊಳ್ಳದೆ ಸಂಧಾನ ಮಾಡಿಕಳುಹಿಸಿದ್ದರು.