Sunday, January 19, 2025
ಸುದ್ದಿ

ಮರಗಳ್ಳತನ ಮಾಡಲು ಹೋಗಿ ಶವವಾದ ; ಕಾಡಿನಲ್ಲೇ ಮೃತದೇಹ ಬಿಟ್ಟು ಪರಾರಿಯಾದ ಮರಕಳ್ಳರ ಗುಂಪು – ಕಹಳೆ ನ್ಯೂಸ್

ಸುಳ್ಯ, ಆ 29 : ಮೀಸಲು ಅರಣ್ಯದಿಂದ ಮರ ಕಳ್ಳತನ ನಡೆಸಲು ಹೋದ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ತಾವು ಕಡಿಯುತ್ತಿದ್ದ ಮರದಡಿಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯ ನೆಲ್ಲೂರು ಕೆಮ್ಯಾಜೆ ಗ್ರಾಮದ ಮರ್ಕಂಜದ ಬೊಮ್ಮಾರು ಬಳಿಯ ತುಂಬೆತಡ್ಕ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮರ್ಕಂಜದ ಬೊಮ್ಮಾರು ಬಳಿಯ ತುಂಬೆತಡ್ಕ ಮೀಸಲು ಅರಣ್ಯಕ್ಕೆ ಸೇರಿದ ಕಾಡಿನಲ್ಲಿ ಈ ದುರ್ಘಟನೆ ನಡೆದಿದ್ದು ಮರ ಕಡಿಯುವ ಗುಂಪಿನಲ್ಲಿದ್ದ ಲೋಕನಾಥ ಬುಡಾಲೆ ಎಂಬವರು ಮರದಡಿಗೆ ಬಿದ್ದು ಮೃತಪಟ್ಟ ವ್ಯಕ್ತಿ. ಈ ಸಮಯದಲ್ಲಿ ಜೊತೆಗೆ ಇದ್ದ ಮರಕಳ್ಳರ ಗುಂಪು ಲೋಕನಾಥರನ್ನು ಮರದಡಿಯಿಂದ ಹೊರತೆಗೆದು ಅವರು ಸತ್ತಿರುವುದನ್ನು ಕಂಡು ಬಿಟ್ಟು ಪರಾರಿಯಾಗಿದ್ದಾರೆ. ಇದೇ ಗುಂಪು ಇದೇ ಕಾಡಿನ ಎರಡು ಕಡೆಗಳಲ್ಲಿ ಮರ ಕಡಿದಿರುವುದಾಗಿ ಹೇಳಲಾಗುತ್ತಿದೆ. ಸುಳ್ಯ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಸ್ಥಳದ ಮತ್ತು ಶವದ ಮಹಜರು ನಡೆಸಿದ್ದಾರೆ. ಪ್ರಕರಣದ ಬಗ್ಗೆ ಪೋಲಿಸರು ತನಿಖೆ ಆರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು