Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿ

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮಾರ್ಚ್ 2ರಂದು ರೈತ ಸಭಾಭವನ ಹಾಗೂ ರೈತ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭ- ಕಹಳೆ ನ್ಯೂಸ್

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪದ್ಮುಂಜದಲ್ಲಿ ನಿರ್ಮಿಸಲಾಗಿರುವ ರೈತ ಸಭಾಭವನ ಹಾಗೂ ರೈತ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭವು ಇದೇ ಬರುವ ಮಾ.2 ರಂದು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಈ ಬಗ್ಗೆ ಪ್ರತಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಅವರು ಮಾಹಿತಿ ನೀಡಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪದ್ಮು0ಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 1976 ರಲ್ಲಿ ಪ್ರಾರಂಭವಾಗಿ ಮೂರು ಗ್ರಾಮದ ಅಂದರೆ ಕಣಿಯೂರು, ಬಂದಾರು, ಮೊಗ್ರು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ನಮ್ಮ ಸಹಕಾರಿ ಸಂಘದ ಮೂಲಕ ಈ ಮೂರು ಗ್ರಾಮದ ರೈತರ ಕೃಷಿ ಅಭಿವೃದ್ಧಿಗೆ ಪೂರಕವಾಗಿ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಪರವಾಗಿ ಕೆಲಸ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಪ್ರಸ್ತುತ ನಮ್ಮ ಸಂಘವು ಸುಮಾರು 3680 ಸದಸ್ಯರನ್ನು ಒಳಗೊಂಡಿದೆ. ಸಂಘವು ಪದ್ಮುಂಜ ಪರಿಸರದಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದಿದೆ. ಹಾಗೂ ಬಂದಾರು ಗ್ರಾಮದಲ್ಲಿ ಶಾಖಾ ಕಟ್ಟಡವನ್ನು ಹೊಂದಿರುತ್ತದೆ. ಸಂಘದಲ್ಲಿ ಒಟ್ಟು 18 ಕೋಟಿ ಠೇವಣಿ ಇರುತ್ತದೆ, ಸಂಘದ ಮೂಲಕ ರೈತರಿಗೆ ಕೃಷಿ ಮತ್ತು ಇತರ ಉದ್ದೇಶಕ್ಕಾಗಿ 69 ಕೋಟಿ ಸಾಲವನ್ನು ವಿತರಿಸಲಾಗಿದೆ. ವಾರ್ಷಿಕ 290 ಕೋಟಿ ವಹಿವಾಟು ನಡೆಸಿ ಕಳೆದ ವರ್ಷ 1 ಕೋಟಿ 3 ಲಕ್ಷ ಲಾಭವನ್ನು ಗಳಿಸಿರುತ್ತದೆ. ಸಂಘದ ಮೂಲಕ ಮೂರು ಗ್ರಾಮದ ಜನರಿಗೆ ಪಡಿತರ ವಿತರಣೆ, ರಾಸಾಯನಿಕ ಗೊಬ್ಬರ ಪೂರೈಕೆ, ಕೃಷಿ ಉಪಕರಣ ಇತ್ಯಾದಿಗಳನ್ನು ನಿರಂತರವಾಗಿ ಪೂರೈಸಿಕೊಂಡು ಬಂದಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ, ನಿದೇಶಕರುಗಳಾದ ರಾಮಣ್ಣ ಮಡಿವಾಳ, ಉದಯ ಕುಮಾರ್, ಶೀಲಾವತಿ ಉಪಸ್ಥಿತರಿದ್ದರು.