Recent Posts

Monday, January 20, 2025
ಸುದ್ದಿ

ಎಕ್ಕೂರು ಕಂಟ್ರಿ ಕ್ಲಬ್‌ ಹಿಂಬದಿ ರಾಜಕಾಲುವೆ ತಡೆಗೋಡೆ ಕಾಮಗಾರಿಗೆ ಶಾಸಕ ಕಾಮತ್‌ ಶಿಲಾನ್ಯಾಸ –ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 49ನೇ ಕಂಕನಾಡಿ ವಾರ್ಡ್‌ನ ಎಕ್ಕೂರು ಕಂಟ್ರಿ ಕ್ಲಬ್‌ ಹಿಂಬದಿಯ ಮತ್ತು ಕಲ್ಲಕಟ್ಟ ಸದಾಶಿವ ನಗರದಲ್ಲಿ ರಾಜಕಾಲುವೆಯ ಆಯ್ದ ಭಾಗಗಳಲ್ಲಿ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್‌ ಮಂಗಳವಾರ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ ನಗರದ ವಿವಿಧ ಕಡೆಗಳಲ್ಲಿ ರಾಜಕಾಲುವೆಗಳ ತಡೆಗೋಡೆ ಮತ್ತು ಚರಂಡಿಗಳ ನಿರ್ಮಾಣಕ್ಕೆಂದೇ 100 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಈ ಮೊತ್ತವನ್ಈ ಕಾಮಗಾರಿಗಳನ್ನು ಮಾಡಿಸಲು ಮುಂದಾಗಿದ್ದಾರೆ. ತಮ್ಮ ಕ್ಷೇತ್ರದ ಜನತೆ ಮಳೆಗಾಲದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕಾಳಜಿವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಗದ್ದೆ, ಬೇಸಾಯ, ಕೃಷಿ ಕಾರ್ಯಗಳು ನಡೆಯುವ ಪ್ರದೇಶಗಳಿಗೆ ಮಾತ್ರ ಸಣ್ಣ ನೀರಾವರಿ ಇಲಾಖೆಯ ಅನುದಾನ ಲಭ್ಯವಿರುತ್ತದೆ. ಆದರೆ ಮಂಗಳೂರು ನಗರದ ಜನರ ಮಳೆಗಾಲದ ಪ್ರವಾಹದ ಸಮಸ್ಯೆ ನಿವಾರಣೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಈ ಅನುದಾನ ಕೊಡಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್‍‌ ಕಟೀಲು ಅವರು ಸಹಕಾರ ನೀಡಿದ್ದಾರೆ ಎಂದು ಶಾಸಕ ಕಾಮತ್‌ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‍‌ ವೀಣಾ ಮಂಗಳ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರಚಂದ್ರ ಶೆಟ್ಟಿ, ಮುಖಂಡರಾದ ಕಿರಣ್ ರೈ, ಯಶೋಧರ್ ಚೌಟ, ಭರತ್ ರಾಜ್‌ ಶೆಟ್ಟಿ, ರೇಖಾ ಶೆಟ್ಟಿ, ಪ್ರೀತಮ್ ತೇಜಸ್ವಿನಿ, ಸುಜಾತಾ ಕೊಟ್ಟಾರಿ, ಚೇತನ್, ಸ್ನೇಹ, ಸುಕೇಶ್‌ ಅಳಪೆ , ಸುಮತಿ, ರಾಘವೇಂದ್ರ ಶೆಟ್ಟಿ, ರಾಮ್ ಎಕ್ಕೂರು, ರವೀಂದ್ರ ರಾವ್, ಕುಮಾರಣ್ಣ, ರಾಜೇಶ್ ಎಕ್ಕೂರು, ರವಿ ಎಕ್ಕೂರು, ಮುಂತಾದವರಿದ್ದರು.