Tuesday, January 21, 2025
ಕ್ರೈಮ್ಬೆಂಗಳೂರುಸುದ್ದಿ

ಬೆಂಗಳೂರಲ್ಲಿ ಯುವತಿಯ ಬರ್ಬರ ಹತ್ಯೆ ; 16 ಬಾರಿ ಚುಚ್ಚಿ ಕೊಂದ ಪಾಗಲ್ ಪ್ರೇಮಿ.! – ಕಹಳೆ ನ್ಯೂಸ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೊಂದು ಬರ್ಬರ ಕೊಲೆಯಾಗಿದೆ. ವರ್ಷಗಳಿಂದ ಪ್ರೀತಿಸ್ತಿದ್ದ ಪ್ರಿಯತಮೆಯನ್ನೇ ಪಾಗಲ್ ಪ್ರೇಮಿಯೊಬ್ಬ 16 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿರೋ ಘಟನೆ ಮುರಗೇಶ್ ಪಾಳ್ಯ (Murugesh Palya) ದ ಎನ್‍ಎಎಲ್ ರಸ್ತೆಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಳನ್ನು ಲೀಲಾ ಪವಿತ್ರಾ (26) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪಾಗಲ್ ಪ್ರೇಮಿ ದಿನಕರ್ ಬನ್ನಾಳ ಕೊಲೆ ಮಾಡಿದ್ದಾನೆ. ಆಂಧ್ರಪ್ರದೇಶ ಮೂಲದ ಲೀಲಾ ಪವಿತ್ರಾ, ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲೀಲಾ ಪವಿತ್ರಾ ಹಾಗೂ ದಿನಕರ್ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ರು. ಆದರೆ ಇತ್ತೀಚೆಗೆ ಲೀಲಾ, ದಿನಕರ್‌ನನ್ನು ಅವಾಯ್ಡ್ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಲಸ ಮುಗಿಸಿ ಲೀಲಾಳನ್ನು ಹತ್ಯೆಗೈದಿದ್ದಾನೆ.

ವಿವಾಹಕ್ಕೆ ಒಪ್ಪದ್ದಕ್ಕೆ ಮಟಾಶ್: ಲೀಲಾ ಕೆಲಸ ಮುಗಿಸಿ ಹೊರಗಡೆ ಬರೋದನ್ನೇ ಕಾಯ್ತಿದ್ದ ದಿನಕರ್, ಮಾತನಾಡಿಸುವ ನೆಪದಲ್ಲಿ ಆಕೆಯ ಎದೆ, ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಲೀಲಾ ಪವಿತ್ರಾ ಹಾಗೂ ದಿನಕರ್ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು ಎನ್ನಲಾಗಿದೆ. ಹೀಗಾಗಿ ವಿವಾಹಕ್ಕೆ ಯುವತಿ ಪೋಷಕರು ಒಪ್ಪಿರಲಿಲ್ಲ. ಹೀಗಾಗಿ ಲೀಲಾ ದಿನಕರ್‍ನನ್ನು ಅವಾಯ್ಡ್ ಮಾಡುತ್ತಿದ್ದುದ್ದಾಗಿ ತಿಳಿದುಬಂದಿದೆ. ಇದರಿಂದ ಕೋಪಗೊಂಡ ದಿನಕರ್ ಲೀಲಾಳನ್ನು ಮದುವೆಯಾಗುವಂತೆ ಬೆನ್ನುಬಿದ್ದಿದ್ದ. ಆದರೆ ಯುವತಿ ಒಪ್ಪದಿದ್ದಕ್ಕೆ ಉಸಿರನ್ನೇ ನಿಲ್ಲಿಸಿಬಿಟ್ಟಿದ್ದಾನೆ. ಕೊಂದ ಬಳಿಕ ಲೀಲಾ ಪವಿತ್ರಾಳ ಮೃತದೇಹದ ಪಕ್ಕದಲ್ಲೇ ಕುಳಿತು ಕಾಲ ಕಳೆದಿದ್ದಾನೆ.

JEEVAN BHIMA NAGAR POLICE STATION

ಇನ್ನು ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಟೇಪ್ ಗ್ರಿಲ್ ಹಾಕಿ, ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಯುವತಿಯ ಮೃತದೇಹ ಕೊಂಡೊಯ್ದ ಮೇಲೂ ಅಲ್ಲೇ ಇದ್ದ ದಿನಕರ್‍ನನ್ನು ಪೊಲೀಸರು ಕರೆದೊಯ್ದಿದ್ದಾರೆ. ಸದ್ಯ ಘಟನೆ ಸಂಬಂಧ ಜೀವನ್ ಭೀಮಾನಗರ ಠಾಣೆ (Jeevan Bima Nagar Police Station) ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.