Sunday, November 24, 2024
ಸುದ್ದಿ

ರಾಜ್ಯ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ : ರಾಜ್ಯದಲ್ಲಿ ಏನಿರುತ್ತೆ..? ಏನಿರಲ್ಲ…? –ಕಹಳೆ ನ್ಯೂಸ್

ಇಂದಿನಿAದ ರಾಜ್ಯ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆ ರಾಜ್ಯದ ಬಹುತೇಕ ಸರ್ಕಾರಿ ಕಚೇರಿಗಳು ಬಂದ್ ಆಗಲಿದ್ದು, ರಾತ್ರಿ ಸರ್ಕಾರಿ ನೌಕರರ ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇಂದು ಮುಷ್ಕರ ಇರಲಿದ್ದು, ಸಭೆ ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಮುಷ್ಕರ ವಾಪಸ್ ಪಡೆದಿಲ್ಲ ಎಂದು ಖಚಿತಪಡಿಸಿದ್ದು, ಬೇಡಿಕೆ ಈಡೇರೋವರೆಗೂ ನೌಕರರು ಅನಿರ್ದಿಷ್ಟವಾಧಿವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಮುಷ್ಕರ ಹಿನ್ನೆಲೆ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳ್ಳಲಿವೆ ಎಂದ್ರು.

ಸಿಎA ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸರ್ಕಾರಿ ನೌಕರರು ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿಲ್ಲ. ಸಭೆಯಲ್ಲಿ ಸಿಎಂಗೆ ಶೇಕಡ 40ರಷ್ಟು ವೇತನ ಹೆಚ್ಚಿಸುವಂತೆ ನೌಕರರು ಮನವಿ ಮಾಡಿಕೊಂಡಿದ್ದಾರೆ. ಶೇ.7 ರಿಂದ 8 ಮಾತ್ರ ಮಾತ್ರ ಸಾಧ್ಯ ಎಂದು ಸಿಎಂ ಹೇಳಿದ್ದಾರಂತೆ. ಹೀಗಾಗಿ ಇಂದಿನಿAದ ಮುಷ್ಕರ ನಡೆಯಲಿದ್ದು, ಮುಷ್ಕರ ಹಿನ್ನೆಲೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ ಎಂಬುದರ ಮಾಹಿತಿ ಇಲ್ಲಿದೆ.

ಯಾವ ಸೇವೆ ಇರಲ್ಲ?
ವಿಧಾನಸೌಧದ ಕಚೇರಿಗಳು, ಬಿಬಿಎಂಪಿ ಕೇಂದ್ರ ಕಚೇರಿ , ಕಂದಾಯ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಪುರಸಭೆ ಕಚೇರಿ, ಸರ್ಕಾರಿ ಶಾಲೆಗಳು, ಸರ್ಕಾರಿ ಕಾಲೇಜು, ಸರ್ಕಾರಿ ಆಸ್ಪತ್ರೆ (ಒಪಿಡಿ), ಉಪ ನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಇಲಾಖೆ, ಕಸ ಸಂಗ್ರಹಣೆ, ನೀರು ಪೂರೈಕೆ.

ಏನೆಲ್ಲಾ ಇರುತ್ತೆ?
ಸರ್ಕಾರಿ ಬಸ್ ಸೇವೆ, ತುರ್ತು ಆರೋಗ್ಯ ಸೇವೆ, ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆ ಮತ್ತು ಐಸಿಯು ಸೇವೆ ಇರಲಿದೆ..