Monday, January 20, 2025
ಸುದ್ದಿ

ಕಾಂತಾರ ಪಾರ್ಟ್-1ಗಾಗಿ ರಿಷಬ್ ಶೆಟ್ಟಿ ಜೊತೆ ಅಖಾಡಕ್ಕೆ ಇಳಿದ ಸ್ಪೆಷಲ್ – ಕಹಳೆ ನ್ಯೂಸ್

ಕಾಂತಾರ ಸಿನೆಮಾ ಸೂಪರ್ ಸಕ್ಸಸ್ ಆದ್ಮೇಲೆ ರಿಷಬ್ ಶೆಟ್ಟಿಯ ಕೆಲಸದ ಶೈಲಿಯೇ ಬದಲಾಗಿ ಬಿಟ್ಟಿದೆ. ಕಾಂತಾರ2 ಚಿತ್ರವನ್ನ ಇನ್ನಷ್ಟು ಸೊಗಸಾಗಿ ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದೆ ತರುವ ದೊಡ್ಡ ಜವಬ್ಧಾರಿ ರಿಷಬ್ ಶೆಟ್ಟಿ ಮೇಲಿದೆ. ಈ ನಡುವೆ ರಿಷಬ್ ಶೆಟ್ಟಿ ‘ನೀವು ಈಗಾಗಲೇ ಕಾಂತಾರ 2 ಚಿತ್ರ ನೋಡಿದ್ದೀರಾ.. ಇನ್ನು ಬರೋದು ಕಾಂತಾರ1’ ಎಂದು ಹೇಳಿ ಮತ್ತೆ ಸಿನಿ ಪ್ರಿಯರ ಕೂತುಹಲವನ್ನ ಹೆಚ್ಚಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜನದ ಕಾತುರತೆಗೆ ಯಾವುದೇ ಮೋಸ ಆಗದಂತೆ ಕಾಂತಾರ ಪಾರ್ಟ್1 ಚಿತ್ರವನ್ನ ತೆರೆ ಮುಂದೆ ತರೋದಿಕ್ಕಾಗಿ, ಸ್ಪೆಷಲ್ ಟೀಮ್ ರೆಡಿ ಮಾಡಿಕೊಂಡಿರುವ ರಿಷಬ್ ಶೆಟ್ಟಿ ಅವ್ರಿಗೆಲ್ಲಾ ಸ್ಪೆಷಲ್ ಟಾಸ್ಕ್ ಕೊಟ್ಟಿದ್ದಾರಂತೆ.

ಕಾಂತಾರ ಪ್ರೀಕ್ವೆಲ್ ಬಗ್ಗೆ ಪ್ಯಾನ್ ಇಂಡಿಯಾ ಲೆವೆಲ್‍ನ ನಿರೀಕ್ಷೆಗಳು ಹುಟ್ಟಿಕೊಂಡಿದ್ದು ಅದಕ್ಕೆ ಮ್ಯಾಚ್ ಆಗುವಂತೆ ಕಲಾವಿದರನ್ನ ಹುಡುಕ್ತಿದ್ದಾರೆ. ಶೇಕಡ 50% ರಷ್ಟು ಮಾತ್ರ ಹಳೆಯ ಕಲಾವಿದರು ಇರಲಿದ್ದು, ಇನ್ನು 50% ಹೊಸ ಕಲಾವಿದರು ಕಾಂತಾರ ಪ್ರೀಕ್ವೆಲ್‍ಗೆ ಎಂಟ್ರಿಕೊಡೋ ನಿರೀಕ್ಷೆ ಇದೆ.

ಕಾಂತಾರ ಪ್ರೀಕ್ವೆಲ್‍ಗಾಗಿ ನಿರ್ದೇಶಕ ರಿಷಬ್ ಶೆಟ್ಟಿ ಸ್ಪೆಷಲ್ ಟೀಮ್‍ವೊಂದು ಕಟ್ಕೊಂಡಿದ್ದಾರಂತೆ. ಸುಮಾರು 16 ಜನರ ಯಂಗ್ ಅಂಡ್ ಟ್ಯಾಲೆಂಟೆಡ್ ರೈಟರ್ ಗಳನ್ನ ಒಟ್ಟುಗೂಡಿಸಿ ಸ್ಕ್ರಿಪ್ಟ್ ಕೆಲಸ ಶುರು ಮಾಡಿದ್ದು, ಒಂದೊಂದು ಸೀನ್ ಬಗ್ಗೆನೂ 16 ಜನರ ರೈಟರ್ ಗಳಿಂದ ಪ್ರತ್ಯೇಕ ಡೈಲಾಗ್ ಬರೆದು ಅದ್ರಲ್ಲಿ ದಿ ಬೆಸ್ಟ್ ಯಾವುದೋ ಅದನ್ನ ಪಿಕ್ ಮಾಡ್ಕೋಳ್ಳೋ ಪ್ಲಾನ್‍ನಲ್ಲಿದ್ದಾರಂತೆ. ಸಾಮಾನ್ಯ ರಿಷಬ್ ಸಿನಿಮಾಗಳಲ್ಲಿ ಒಂದಿಷ್ಟು ಖಾಯಂ ರೈಟರ್‍ಗಳು ಇದ್ದೇ ಇರ್ತಾರೆ. ಕಾಂತಾರ ಪ್ರೀಕ್ವೆಲ್‍ಗಾಗಿ ಸ್ಪೆಷಲ್ ಆಗಿ ಒಂದಿಷ್ಟು ಹೊಸ ರೈಟರ್‍ಗಳನ್ನ ಸೆಲೆಕ್ಟ್ ಮಾಡ್ಕೊಂಡಿದ್ದಾರಂತೆ. ಒಟ್ಟಾರೆ ಈ ವರ್ಷವೇ ಶೂಟಿಂಗ್ ಅಡ್ಡಾಗೆ ಎಂಟ್ರಿಕೊಡಲಿರೋ ಕಾಂತಾರ ಪ್ರೀಕ್ವೆಲ್ ಮುಂದಿನ ಬೇಸಿಗೆ ಸಮಯಕ್ಕೆ ಪ್ರೇಕ್ಷಕ ಪ್ರಭುಗಳಿಗೆ ದರ್ಶನ ಕೊಡಬಹುದು.