Monday, January 20, 2025
ಸುದ್ದಿ

ಉಡುಪಿ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಿಸಲು ರೂ. 5.50 ಕೋಟಿ ಬಿಡುಗಡೆ – ಮುಖ್ಯಮಂತ್ರಿಯವರಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಕಹಳೆ-ನ್ಯೂಸ್

ಉಡುಪಿಯ ಪ್ರಮುಖ ಪ್ರವಾಸಿ ತಾಣವಾದ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಿಸುವ ರೂ. 5.50 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಪ್ರಮುಖ ಕಾಮಗಾರಿಗೆ ಕೈಗೊಳ್ಳುವ ಬೇಡಿಕೆಯನ್ನು ಪೂರೈಸಿದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ಟೂರಿಸಂ ವಿಷನ್ ಗ್ರೂಫಿನ ಶಿಫಾರಸ್ಸುಗಳಲ್ಲಿ ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ನಿರ್ಮಿಸುವ ಫೆರ್ರಿ ಜಟ್ಟಿ ನಿರ್ಮಿಸುವ ಕಾಮಗಾರಿಯನ್ನು ಪ್ರವಾಸೋದ್ಯಮ ಇಲಾಖೆಯ ಮೇಲುಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲು ಯೋಜಿಸಲಾಗಿದ್ದು, ಆದರೆ ಸಿ.ಆರ್.ಝಡ್. ನಿಯಮಾವಳಿ ಅನ್ವಯ ಫೆರ್ರಿ ಜಟ್ಟಿ ನಿರ್ಮಿಸಲು ಅಸಾಧ್ಯವಾಗಿರುವುದರಿಂದ ಉಡುಪಿ ಜಿಲ್ಲಾಧಿಕಾರಿಯವರು ಫೆರ್ರಿ ಜಟ್ಟಿ ಬದಲು ಫ್ಲೋಟಿಂಗ್ ಜಟ್ಟಿ ನಿರ್ಮಿಸುವ ಬಗ್ಗೆ ಅಭಿಪ್ರಾಯ ಹಾಗೂ ಅನುಷ್ಠಾನಕ್ಕೆ ಸಲ್ಲಿಸಿದ ವರದಿ ಮತ್ತು ಲೋಕೋಪಯೋಗಿ ಇಲಾಖೆ ಮೂಲಕ ಸಲ್ಲಿಸಿದ ಅಂದಾಜು ಪಟ್ಟಿಯಂತೆ ಪ್ರವಾಸೋದ್ಯಮ ಇಲಾಖೆಯು ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಿಸುವ ರೂ 5.50 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಿ ಆದೇಶಿಸಿದೆ.