Tuesday, January 21, 2025
ಕ್ರೈಮ್ಸುದ್ದಿ

ನಾಪತ್ತೆಯಾಗಿದ್ದ ಖ್ಯಾತ ಮಾಡೆಲ್ ತಲೆಬುರುಡೆ ಸೂಪ್ ಮಡಿಕೆಯಲ್ಲಿ ಪತ್ತೆ.! – ಕಹಳೆ ನ್ಯೂಸ್

ಹಾಂಕಾಂಗ್ : ಹಾಂಕಾಂಗ್‍ನಿಂದ ಕಳೆದ ವಾರ ನಾಪತ್ತೆಯಾಗಿದ್ದ ಖ್ಯಾತ ಮಾಡೆಲ್ ಅಬ್ಬಿ ಚೋಯ್ ಅವರ ಛಿದ್ರಗೊಂಡ ದೇಹದ ತುಂಡುಗಳು ಥಾಯ್ ಪೋ ಜಿಲ್ಲೆಯ ಮನೆಯೊಂದರ ಫ್ರಿಡ್ಜ್‍ನಲ್ಲಿ ಪತ್ತೆಯಾಗಿವೆ. ಈ ಮನೆಯಲ್ಲಿ ಮಾಂಸ ಕತ್ತರಿಸುವ ಸಾಧನ ಮತ್ತು ಕೆಲ ಬಟ್ಟೆ ಬರೆ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದಾಗ್ಯೂ ಆಕೆಯ ರುಂಡ ಮತ್ತು ಮುಂಡ ಪತ್ತೆಯಾಗಿರಲಿಲ್ಲ. ಇದೀಗ ಸೂಪ್ ಇದ್ದ ಮಡಿಕೆಯಲ್ಲಿ ಅವರ ತಲೆ ಮತ್ತು ಮನುಷ್ಯನ ಅವಶೇಷಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೆಕಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಇದರಲ್ಲಿ ಚರ್ಮ ಅಥವಾ ಮಾಂಸ ಇರಲಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧೀಕ್ಷಕ ಅಲನ್ ಚಂಗ್ ಹೇಳಿದ್ದಾರೆ. ಮನುಷ್ಯ ದೇಹದ ತುಂಡುಗಳು ಸೂಪ್‍ನಲಿ ಕ್ಯಾರೆಟ್ ಮತ್ತು ಮೂಲಂಗಿಯಂತೆ ತೇಲುತ್ತಿದ್ದವು ಎಂದು ಹೇಳಿದ್ದಾರೆ.

ಈ ಮಾಡೆಲ್ ದಾಳಿಗೊಳಗಾದಾಗ ಕಾರಿನಲ್ಲಿದ್ದರು ಮತ್ತು ಮನೆಗೆ ಕರೆದೊಯ್ಯುವ ವೇಳೆ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ವಿಧಿವಿಜ್ಞಾನ ಪರೀಕ್ಷೆಯಿಂದ ಅವರ ತಲೆಯ ಹಿಂಭಾಗದಲ್ಲಿ ದೊಡ್ಡ ರಂಧ್ರ ಇರುವುದು ದೃಢಪಟ್ಟಿತ್ತು. ಇದು ಮಾರಕ ದಾಳಿ ನಡೆದಿರುವುದಕ್ಕೆ ಪುರಾವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.