Tuesday, January 21, 2025
ಸುದ್ದಿ

ತನ್ನ ಗಂಡ ಮತ್ತೊಬ್ಬಳ ಹಿಂದೆ ಓಡಿ ಹೋಗಿದ್ದಕ್ಕೆ ರಿವೇಂಜ್ ತೀರಿಸಲು ಓಡಿ ಹೋದವಳ ಪತಿಯನ್ನೇ ಮದುವೆಯಾದ ಮಹಿಳೆ..! – ಕಹಳೆ ನ್ಯೂಸ್

ಬಿಹಾರ: ಇತ್ತೀಚಿನ ದಿನದಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿ ದಂಪತಿ ದೂರವಾಗುವ ಸುದ್ದಿಗಳನ್ನು ಸರ್ವೆಸಾಮನ್ಯವಾಗಿವೆ. ಇಲ್ಲೊಬ್ಬಳು ಮಹಿಳೆ ತಮ್ಮ ಪತಿಗೆ ಬುದ್ದಿ ಕಲಿಸಲು ಮಾಸ್ಟರ್​​ ಪ್ಲ್ಯಾನ್​ ಮಾಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಗಂಡ ಮತ್ತೊಬ್ಬಳ ಹಿಂದೆ ಓಡಿ ಹೋಗಿದ್ದಕ್ಕೆ ರಿವೇಂಜ್ ತೀರಿಸಲು ಓಡಿ ಹೋದವಳ ಪತಿಯನ್ನೇ ಮದುವೆಯಾದ ಅಪರೂಪದ ಘಟನೆ ಬಿಹಾರದ ಖಗರಿಯಾ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಿಹಾರ ಜಿಲ್ಲೆಯ ಚೌಥಮ್ ಬ್ಲಾಕ್​ನ ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ 2009ರಲ್ಲಿ ರೂಬಿ ದೇವಿ ಎಂಬವರನ್ನು ವಿವಾಹವಾಗಿದ್ದರು. ಕೆಲ ಸಮಯದಿಂದ ನೀರಜ್‌ ಪತ್ನಿ ರೂಬಿ ದೇವಿ, ಮುಖೇಶ್ ಎಂಬಾತನ ಜೊತೆ ಸಂಬಂಧವನ್ನೂ ಬೆಳೆಸಿದ್ದಳು. ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ ಪತ್ನಿ ರೂಬಿ, ಮುಖೇಶ್ ಜೊತೆ ಓಡಿ ಹೋಗಿರುವ ವಿಷಯ ತಿಳಿದು ತಕ್ಷಣವೇ, ನೀರಜ್ ಮುಖೇಶ್ ವಿರುದ್ಧ ಪಸ್ರಾಹಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾನೆ.

ಮುಖೇಶ್ ವಾಪಸ್ ಬರಲು ಒಪ್ಪದ ಕಾರಣ, ಮುಖೇಶ್ ಪತ್ನಿ ಮತ್ತು ನೀರಜ್‌ ಇಬ್ಬರಿಗೂ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ನೀರಜ್ ಮತ್ತು ಮುಖೇಶ್ ಪತ್ನಿ ವಿವಾಹವಾಗಲು ನಿರ್ಧಾರ ಮಾಡಿ ಫೆಬ್ರವರಿ 18ರಂದು ಸ್ಥಳೀಯ ದೇವಾಲಯವೊಂದರಲ್ಲಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ತನ್ನ ಗಂಡನ ಪರ ಮಹಿಳೆಯೊಂದಿಗೆ ಓಡಿ ಹೋಗಿದ್ದಕ್ಕೆ ಆಕೆಯ ಪತಿಯನ್ನೇ ಮದುವೆ ಆಗುವ ಮೂಲಕ ಇಬ್ಬರಿಗೂ ಪರಸ್ಪರ ಪಾಠ ಕಲಿಸಲು ನೂತನ ದಂಪತಿ ನಿರ್ಧರಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.