Recent Posts

Sunday, January 19, 2025
ಸಿನಿಮಾ

‘ ನಾನೇ ರುಕ್ಕು, ಕೊಡ್ತೀನಿ ಒಂದು ಲುಕ್ಕು, ನಾನಂದ್ರೆ ಫ‌ುಲ್ಲು ಕಿಕ್ಕು ‘ ; ನೀತು ಕಿಕ್‌ ಗೆ ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ – ಕಹಳೆ ನ್ಯೂಸ್

ವಿಠ್ಠಲ್ ಭಟ್ ನಿರ್ದೇಶನದ ರಮಣಿ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ .ಡಿ ಅವರ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ “ಹ್ಯಾಂಗೋವರ್’ ಚಿತ್ರದ ಸ್ಪೆಷಲ್ ಐಟಂ ಸಾಂಗ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು! ಗಾಳಿಪಟ ಚಿತ್ರದ ಗಂಡುಬೀರಿ ಹುಡುಗಿ ನೀತು “ಹ್ಯಾಂಗೋವರ್’ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. 

ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಸುಮಾರು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಅಲ್ಲದೇ ನೀತು ಅವರ ಸಿನಿಮಾ ಜರ್ನಿಯಲ್ಲಿ ಇದು ನನ್ನ “ದಿ ಬೆಸ್ಟ್ ಡಾನ್ಸ್’ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಒಂದು ಪಬ್‌ ಸಾಂಗ್‌ ಇದ್ದುದರಿಂದ ಅದನ್ನು ನೀತು ಅವರಿಂದ ಮಾಡಿಸಬೇಕು ಅಂತ ಚಿತ್ರತಂಡ ನಿರ್ಧರಿಸಿ, ಇತ್ತೀಚೆಗೆ ಮೈಸೂರಿನ ಫ‌ನ್‌ ಫೋರ್ಟ್‌ನಲ್ಲಿ ಹಾಕಿದ್ದ ವಿಶೇಷ ಪಬ್‌ಸೆಟ್‌ನಲ್ಲಿ ನೀತು ಅವರಿಂದ ಹೆಜ್ಜೆ ಹಾಕಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೀರ್‌ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ “ನಾನೇ ರುಕ್ಕು, ಕೊಡ್ತೀನಿ ಒಂದು ಲುಕ್ಕು, ನಾನಂದ್ರೆ ಫ‌ುಲ್ಲು ಕಿಕ್ಕು, ಎಂಜಾಯಿ ಮಾಡಿ, ಯಾರು ಇಲ್ಲಿ ಅಂಜೋದು ಬೇಡ, ಆಸೆ ಅದುಮೋದು ಬೇಡ, ಅಂದ ಅನುಭವಿಸಿ ನೋಡಿ …’ ಎಂಬ ಹಾಡಿಗೆ ಪಡ್ಡೆಗಳಿಗೂ ಕಿಕ್‌ ಕೊಡುವಂತೆ ನೀತು ಕುಣಿದಿದ್ದಾರೆ. ಕೃಷ್ಣ ಅವರು ಬರೆದ ಈ ಹಾಡನ್ನು ನೃತ್ಯ ನಿರ್ದೇಶಕ ಕಲೈ ಸಂಯೋಜನೆ ಮಾಡಿದ್ದಾರೆ.

ಒಂದಷ್ಟು ನೃತ್ಯ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ನೀತು ಅವರನ್ನು ಯೋಗಿ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಸೆಲೆಬ್ರಿಟಿ ಡಾನ್ಸ್‌ ಶೋ ಈವೆಂಟ್‌ನ ಎಂಜಾಯ್‌ ಮಾಡಲು ಬಂದ ಮೂವರು ಹುಡುಗರು ಮತ್ತು ಮೂವರು ಹುಡುಗಿಯರ “ಹ್ಯಾಂಗೋವರ್‌’ ಕಥೆಯಿದು. ಚಿತ್ರವು ಸೆಪ್ಟೆಂಬರ್ ಎರಡನೇ ವಾರ ತೆರೆಗೆ ಬರುವ ಸಾಧ್ಯತೆಯಿದೆ.