Wednesday, January 22, 2025
ಸುದ್ದಿ

ಹಿಂದೂ ಸಂಘಟನೆಯ ಹಲವು ಮುಖಂಡರ ವಿರುದ್ಧ ಬಂಧನ ವಾರಂಟ್ : ಸಮಸ್ಯೆ ಪರಿಹರಿಸುವಂತೆ ಪೊಲೀಸ್ ಅಧೀಕ್ಷಕರಿಗೆ ಜಗನ್ನಿವಾಸ್ ರಾವ್ ಮನವಿ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನ್ನಿವಾಸ್ ರಾವ್‌ರವರು ಪೊಲೀಸ್ ಅಧೀಕ್ಷಕರ ಕಚೇರಿಗೆ ಇಂದು ಭೇಟಿ ನೀಡಿ, ಹಿಂದೂ ಸಂಘಟನೆಯ ಹಲವು ಮುಖಂಡರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದ್ದು, ಈ ವಿಚಾರವನ್ನು ಪರಿಹರಿಸುವಂತೆ ಮನವಿ ಮಾಡಿದ್ದಾರೆ.
ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸದAತೆ ಹಾಗೂ ಕಾರ್ಯಕರ್ತರಿಗೆ ತೊಂದರೆಯಾಗದAತೆ ವಿಚಾರವನ್ನು ಪರಿಹರಿಸುವಂತೆ ಪೊಲೀಸ್ ಅಧೀಕ್ಷಕರರಲ್ಲಿ ಜಗನ್ನಿವಾಸ್ ರಾವ್‌ರವರು ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಜಗನ್ನಿವಾಸ್ ರಾವ್‌ರವರು ಮಾಹಿತಿ ನೀಡಿದ್ದು, ಕೇವಲ ಹಿಂದೂ ಸಂಘಟನೆ ಕಾರ್ಯಕರ್ತರು ಮಾತ್ರವಲ್ಲದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇತರ ಸಂಘಟನೆಗಳವರ ವಿರುದ್ಧವೂ ಸಾರ್ವಜನಿಕ ಶಾಂತಿ ಭಂಗ ಪ್ರಕರಣ ದಾಖಲು ಮಾಡಲಾಗಿದೆ ಎಂದು ಡಿವೈಎಸ್ಪಿಯವರು ತಿಳಿಸಿರುವುದಾಗಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು