Wednesday, January 22, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಪುತ್ತೂರಲ್ಲಿ ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿ ಜಿಹಾದಿ ಶಾಫಿ ಬೆಳ್ಳಾರೆ ; ಉಳ್ಳಾಲದಲ್ಲಿ ಖಾದರ್ ಎದುರು ನೀ ತಾಂಟ್ರೆ ಬಾ ತಾಂಟ್ ಖುಖ್ಯಾತಿಯ ರಿಯಾಜ್ ಪರಂಗಿಪೇಟೆಗೆ SDPI ಟಿಕೆಟ್‌ – ಕಹಳೆ ನ್ಯೂಸ್

ಬೆಂಗಳೂರು (ಮಾ.01): ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಶಿಯಲ್ ಡೆಮೋಕ್ರ್ಯಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ದಿಂದ ಸ್ಪರ್ಧೆ ಮಾಡುವ 2ನೇ ಪಟ್ಟಿಯನ್ನು ಎಸ್‌ಡಿಪಿಐ ಅಧ್ಯಕ್ಷರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆಯ ಆರೋಪಿ, ಜಿಹಾದಿ ಶಫಿ ಬೆಳ್ಳಾರೆ ಅವರಿಗೆ ಟಿಕೆಟ್‌ ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಜನವರಿ ತಿಂಗಳಲ್ಲಿ ಮೊದಲ ಪಟ್ಟಿಯಲ್ಲಿ ಒಟ್ಟು 10 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಇಂದು ಎರಡನೇ ಪಟ್ಟಿಯಲ್ಲಿ ಒಟ್ಟು 9 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇಂದಿನ ಒಂಭತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಹಿಂದೂ ಧರ್ಮೀಯರಿಗೆ ಟಿಕೆಟ್‌ ಹಂಚಿಕೆ ಮಾಡಲಾಗಿದೆ. ಒಟ್ಟು 43 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಖಚಿತವಾಗಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದು, ಮತ್ತೊಂದು ಪಟ್ಟಿಯಲ್ಲಿ ಉಳಿದವರ ಹೆಸರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಕೊಲೆ ಆರೋಪಿ ಶಾಫಿ ಬೆಳ್ಳಾರೆ

2023 ಕರ್ನಾಟಕ ವಿಧಾನಸಭಾ ಚುನಾವಣೆ SDPI ಆಭ್ಯರ್ಥಿಗಳ 2ನೇ ಪಟ್ಟಿಯ ವಿವರ ಇಲ್ಲಿದೆ.
ವಿಧಾನಸಭಾ ಕ್ಷೇತ್ರ (ಜಿಲ್ಲೆ) ಅಭ್ಯರ್ಥಿಗಳ ಹೆಸರು

ಮಡಿಕೇರಿ (ಕೊಡಗು) ಅಮೀನ್ ಮೊಹಸಿನ್
ರಾಯಚೂರು (ರಾಯಚೂರು) ಸಯ್ಯದ್ ಇಸಾಗಕ್ ಹುಸೇನ್
ತೇರದಾಳ (ಬಾಗಲಕೋಟ) ಯಮುನಪ್ಪಾ ಗುಣದಾಲ್
ಮೂಡಿಗೆರೆ (ಎಸ್ ಸಿ) ಚಿಕ್ಕಮಗಳೂರು ಅಂಗಡಿ ಚಂದ್ರು
ಬಿಜಾಪುರ ನಗರ (ವಿಜಯಪುರ) ಅಥಾವುಲ್ಲಾಹ್ ದ್ರಾಕ್ಷಿ
ಮಂಗಳೂರು (ದಕ್ಷಿಣ ಕನ್ನಡ) ರಿಯಾಜ್ ಫರಂಗಿಪೇಟೆ
ಗುಲ್ಬರ್ಗ ಉತ್ತರ (ಕಲಬುರಗಿ) ರಹೀಮ್ ಪಟೇಲ್
ಪುತ್ತೂರು (ದಕ್ಷಿಣ ಕನ್ನಡ) ಶಫಿ ಬೆಳ್ಳಾರೆ
ಹುಬ್ಬಳ್ಳಿ ಪೂರ್ವ (ಧಾರವಾಡ) ಡಾ.ವಿಜಯ ಎಂ. ಗುಂಟ್ರಾಲ್
ಮೊದಲ ಪಟ್ಟಿಯಲ್ಲಿ ಯಾರ ಹೆಸರಿದೆ?: ಈ ಹಿಂದೆ ಜನವರಿ 7ರಂದು ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಜಿ ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ( ಎಸ್‌ಡಿಪಿಐ) ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆಗೊಳಿಸಿದ್ದರು. ಮೊದಲನೇ ಪಟ್ಟಿಯಲ್ಲಿ ಘೋಷಣೆ ಮಾಡಲಾದ ಅಭ್ಯರ್ಥಿಗಳ ವಿವರ ಇಲ್ಲಿದೆ.

ವಿಧಾನಸಭಾ ಕ್ಷೇತ್ರ (ಜಿಲ್ಲೆ) ಅಭ್ಯರ್ಥಿಗಳ ಹೆಸರು :

ನರಸಿಂಹರಾಜ (ಮೈಸೂರು) ಅಬ್ದುಲ್ ಮಜೀದ್
ಪುಲಕೇಶಿ ನಗರ (ಬಿಬಿಎಂಪಿ) ಭಾಸ್ಕರ್ ಪ್ರಸಾದ್
ಸರ್ವಜ್ಞ ನಗರ (ಬಿಬಿಎಂಪಿ) ಅಬ್ದುಲ್ ಹನ್ನಾನ್
ಬಂಟ್ವಾಳ (ದಕ್ಷಿಣ ಕನ್ನಡ) ಇಲ್ಯಾಸ್ ಮುಹಮ್ಮದ್
ಮೂಡಬಿದರೆ (ದಕ್ಷಿಣ ಕನ್ನಡ) ಅಲ್ಪಾನ್ಸೋ ಫ್ರಾಂಕೋ
ಬೆಳ್ತಂಗಡಿ (ಉಡುಪಿ) ಅಕ್ಬರ್ ಬೆಳ್ತಂಗಡಿ
ಕಾಪು (ಉಡುಪಿ) ಹನೀಶ್ ಮುಳೂರು
ದಾವಣಗೆರೆ ದಕ್ಷಿಣ (ದಾವಣಗೆರೆ_ ಇಸ್ಮಾಯಿಲ್ ಝಬಿಯುಲ್ಲಾ
ಚಿತ್ರದುರ್ಗನಗರ (ಚಿತ್ರದುರ್ಗ) ಶ್ರೀನಿವಾಸ್ ಬಾಳೆಕಾಯಿ
ವಿಜಯನಗರ (ಹೊಸಪೇಟೆ-ವಿಜಯನಗರ) ನಝೀರ್ ಖಾನ್

ಕಾಂಗ್ರೆಸ್‌, ಜೆಡಿಎಸ್‌ಗೆ ಪರ್ಯಾಯ ಪಕ್ಷ: ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ನಂತರ ಮಾತನಾಡಿದ್ದ ಅಧ್ಯಕ್ಷ ಎಂಕೆ ಫೈಜಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕು. ಆದರೆ ಅವರ ಕೈಯಲ್ಲೂ ಕೂಡ ಸಾಧ್ಯ ಆಗ್ತಿಲ್ಲ. ಹೀಗಾಗಿ SDPI ಹೊಸ ಪರ್ಯಾಯ ಪಕ್ಷವಾಗಿದೆ. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.