Monday, November 25, 2024
ಸುದ್ದಿ

ಕೈಲಾಸ ದೇಶ ಸೃಷ್ಟಿಸಿದ ನಿತ್ಯಾನಂದನಿಗೆ ಬಿಗ್ ಶಾಕ್ ನೀಡಿದ ವಿಶ್ವಸಂಸ್ಥೆ – ಕಹಳೆ ನ್ಯೂಸ್

ಲೈಂಗಿಕ ಶೋಷಣೆ ಮತ್ತು ಅತ್ಯಾಚಾರದ ಆರೋಪ ಹೊತ್ತು ಭಾರತದಿಂದ ಪರಾರಿಯಾಗಿ ‘ಕೈಲಾಸ’ ಎಂಬ ಕಾಲ್ಪನಿಕ ದೇಶವನ್ನು ಕಟ್ಟಿಕೊಂಡಿರುವ ನಿತ್ಯಾನಂದನಿಗೆ ವಿಶ್ವಸಂಸ್ಥೆ ಬಿಗ್ ಶಾಕ್ ನೀಡಿದೆ. ನಿತ್ಯಾನಂದನ ಕಾಲ್ಪನಿಕ ದೇಶವನ್ನು ಸ್ವೀಕರಿಸಲು ವಿಶ್ವಸಂಸ್ಥೆ ನಿರಾಕರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆಬ್ರವರಿ ೨೪ ರಂದು ವಿಶ್ವಸಂಸ್ಥೆಯಲ್ಲಿ ಆಯೋಜಿಸಿದ್ದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಭೆಯಲ್ಲಿ ಕೈಲಾಸದ ಪ್ರತಿನಿಧಿಗಳು ಭಾಗವಹಿಸಿದ್ದರು. ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಯಾಗಿ ಶಿಷ್ಯೆ ವಿಜಯಪ್ರಿಯಾ ಭಾಗಿಯಾಗಿದ್ದರು. ಈ ಸಭೆಯಲ್ಲಿ ವಿಜಯಪ್ರಿಯಾ ಭಾರತದ ವಿರುದ್ಧ ವಿಷವನ್ನು ಉಗುಳಿದ್ದರು. ಮಾತ್ರವಲ್ಲ ನಿತ್ಯಾನಂದರನ್ನು ಹಿಂದೂ ಧರ್ಮದ ಪರಮೋಚ್ಚ ಗುರು ಎಂದು ಕರೆದಿದ್ದರು.

ನಿತ್ಯಾನಂದ ತನ್ನ ಶಿಷ್ಯೆಯನ್ನು ವಿಶ್ವಸಂಸ್ಥೆಗೆ ಕಳುಹಿಸಿ ಭಾರತದ ವಿರುದ್ಧ ಮಾತನಾಡ್ತಿದ್ದಂತೆಯೇ ವ್ಯಾಪಕ ಚರ್ಚೆಗಳು ಶುರುವಾಗಿದ್ದವು. ಇದೀಗ ಈ ವಿಚಾರದಲ್ಲಿ ವಿಶ್ವಸಂಸ್ಥೆಯು ಮೌನ ಮುರಿದಿದ್ದು, Uಯುಎನ್ ಸಭೆಯಲ್ಲಿ ನಿತ್ಯಾನಂದನ ದೇಶ ‘ಕೈಲಾಸ’ ಎನ್‌ಜಿಒ ಆಗಿ ಭಾಗವಹಿಸಿದೆ. ನಿತ್ಯಾನಂದನ ಪ್ರತಿನಿಧಿ ವಿಜಯಪ್ರಿಯಾ ಇಲ್ಲಿ ಏನೇ ಹೇಳಿದರೂ ಅದನ್ನು ಪರಿಗಣಿಸುವುದಿಲ್ಲ. ಮತ್ತು ಸಂಬAಧಪಟ್ಟ ಸಮಿತಿಯ ಮುಂದೆ ಅದನ್ನು ಕಳುಹಿಸುವುದಿಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟನೆ ನೀಡಿದೆ.

ಫೆಬ್ರವರಿ ೨೪ ರಂದು ನಡೆದ ಸಭೆಯು ಬಹಿರಂಗ ಸಭೆಯಾಗಿದ್ದು, ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಸಭೆಯ ಮುಂದೆ ಕೇಳಲಾದ ಪ್ರಶ್ನೆಗಳು ಹಾಗೂ ಆರೋಪಗಳನ್ನು ವಿಶ್ವಸಂಸ್ಥೆಯ ತಜ್ಞರು ಪರಿಶೀಲನೆ ಮಾಡುತ್ತಾರೆ. ಆದರೆ ಕೈಲಾಸದ ಅಭಿಪ್ರಾಯಗಳನ್ನು ವಿಶ್ವಸಂಸ್ಥೆಯು ಪರಿಗಣಿಸುವುದಿಲ್ಲ ಎಂದು ಹೇಳಿದೆ.