Friday, January 24, 2025
ಸುದ್ದಿ

ರಾಕ್ಷಸನಂತೆ ವರ್ತಿಸಿದ ಶಿಕ್ಷಕ..! : 70 ಬಾರಿ ದೊಣ್ಣೆ ಹಾಗೂ ಕೈಗಳಿಂದ ವಿದ್ಯಾರ್ಥಿಯ ಮೇಲೆ ಹಲ್ಲೆ..! –ಕಹಳೆ ನ್ಯೂಸ್

ಶಿಕ್ಷಕನೊಬ್ಬ ವಿದ್ಯಾರ್ಥಿಗೆ 32 ಥಳಿಸಿ ಕ್ರೌರ್ಯದಿಂದ ವರ್ತಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯ ಮದ್ರಸಾವೊಂದರಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

14 ವರ್ಷದ ವಿದ್ಯಾರ್ಥಿಯೊಬ್ಬ ಸರಿಯಾಗಿ ಓದುತ್ತಿಲ್ಲ ಎಂಬ ಕಾರಣಕ್ಕೆ ಶಿಕ್ಷಕನೋರ್ವ ಮನಬಂದಂತೆ ಥಳಿಸಿದ್ದು, ಕೇವಲ70 ಸೆಕೆಂಡುಗಳಲ್ಲಿ 70 ಬಾರಿ ದೊಣ್ಣೆ ಹಾಗೂ ಕೈಗಳಿಂದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಸಂದರ್ಭದಲ್ಲಿ ವಿದ್ಯಾರ್ಥಿ ತನ್ನನ್ನು ಬೀಡುವಂತೆ ಕೇಳಿಕೊಂಡರೂ ಕೂಡ ಶಿಕ್ಷಕ ರಾಕ್ಷಸನಂತೆ ವರ್ತಿಸಿ ಹಲ್ಲೆ ಮುಂದುವರಿಸಿದ್ದಾನೆ.

ಶಿಕ್ಷಕ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಜೊತೆಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಘಟನೆಯ ಬಳಿಕ 32 ವರ್ಷದ ಶಿಕ್ಷಕ ಫಹಾದ್ ಭಗತ್ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಸಂಬಂಧ ನಿಜಾಂಪುರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಶಿಕ್ಷಕನಿಗಾಗಿ ಬಲೆ ಬೀಸಿದ್ದಾರೆ.

ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಪಡೆಯಬೇಕು, ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು ಎಂದುಕೊಂಡು ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸ್ತಾರೆ. ಆದ್ರೆ ಶಾಲೆಯಲ್ಲಿ ಶಿಕ್ಷಕರು ಕ್ರೌರ್ಯದಿಂದ ವರ್ತಿಸಿದರೆ ಮಕ್ಕಳನ್ನ ಯಾವ ಧೈರ್ಯದ ಮೇಲೆ ಶಾಲೆಗೆ ಕಳುಹಿಸೋದು ಎಂದು ಪೋಷಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.