Friday, January 24, 2025
ಸುದ್ದಿ

ಮಾ.12ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಾಂಜನೇಯ ಘಟಕ ತಿಂಗಳಾಡಿ ವತಿಯಿಂದ ಪ್ರಥಮ ಬಾರಿಗೆ ಸೂರ್ಯ ಬೆಳಕಿನ ಫ್ರೊ ಮಾದರಿಯ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ – ಕಹಳೆ ನ್ಯೂಸ್

ಪುತ್ತೂರು : ಮಾ.12ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಾಂಜನೇಯ ಘಟಕ ತಿಂಗಳಾಡಿ ವತಿಯಿಂದ ೫ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪ್ರಥಮ ಬಾರಿಗೆ ಸೂರ್ಯ ಬೆಳಕಿನ 55ಕೆಜಿ ವಿಭಾಗದ ಪುರುಷರ ಫ್ರೊ ಮಾದರಿಯ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟವು ತಿಂಗಳಾಡಿ ಶ್ರೀಕ್ಷೇತ್ರ ದೇವಗಿರಿ ಭಜನಾ ಮಂದಿರದಲ್ಲಿ ನಡೆಯಲಿದೆ.
ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಾಂಜನೇಯ ತಿಂಗಳಾಡಿ ಘಟಕದ ಸಂಯೋಜಕರಾದ ಜಗದೀಶ ರೈ ಚಾವಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರೂ ಹಾಗೂ ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡದ ಮಾಜಿ ಅಧ್ಯಕ್ಷರಾದ ಕಡಮಜಲು ಸುಬಾಷ್ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾರ್ಯಕ್ರಮದಲ್ಲಿ ಬೆಂಗಳೂರು ಕೆ ಆರ್ ಪುರಂ ನ ತಹಶೀಲ್ದಾರರಾದ ಅಜಿತ್ ರೈ ಸೊರಕೆ,ಉದ್ಯಮಿ ಅಜಿತ್ ಭಂಡಾರಿ ಕುತ್ಯಾಡಿ, ಬಜರಂಗದಳ ಪುತ್ತೂರು ಗ್ರಾಮಂತರ ಪ್ರಖಂಡದ ಸಂಯೋಜಕರಾದ ಅನಿಲ್ ಇರ್ದೆ, ಕೆದಂಬಾಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಭಾಸ್ಕರ ರೈ ಮಿತ್ರಂಪಾಡಿ, ಶ್ರೀ ಕ್ಷೇತ್ರ ಭಜನಾ ಮಂದಿರ, ದೇವಗಿರಿಯ ಅಧ್ಯಕ್ಷರಾದ ಜಯರಾಮ ರೈ ಮಿತ್ರಂಪಾಡಿ, ಬಿ.ಜೆ.ಪಿ ಯುವಮೋರ್ಚಾದ ಅಧ್ಯಕ್ಷರಾದ ಸಹಜ್ ರೈ ಬಳಜ್ಜ, ಮಂಗಳೂರು ಮೆಸ್ಕಾಂನ ನಿರ್ದೇಶಕರಾದ ಕಿಶೋರ್ ಕುಮಾರ್ ಬೊಟ್ಯಾಡಿ, TAPCM ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಕೆದಂಬಾಡಿ ಗುತ್ತು, ವಿಶ್ವ ಹಿಂದೂ ಪರಿಷದ್ ನಗರ ಪ್ರಖಂಡದ ಉಪಾಧ್ಯಕ್ಷರಾದ ಶೇಷಷ್ಪ ಗೌಡ ಬೆಳ್ಳಿಪ್ಪಾಡಿ, ವೀರಾಂಜನೇಯ ಘಟಕ ತಿಂಗಳಾಡಿಯ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯದರ್ಶಿ ಕಿಶನ್ ತ್ಯಾಗರಾಜ ನಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವೀರಾಂಜನೇಯ ಘಟಕ ತಿಂಗಳಾಡಿಯ ವಿಶ್ವ ಹಿಂದೂ ಪರಿಷದ್ ನ ಅಧ್ಯಕ್ಷರಾದ ಅಮರ್ ರೈ ದರ್ಬೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಸಹಸಂಯೋಜಕರಾದ ಮುರಳಿಕೃಷ್ಣ ಹಸಂತಡ್ಕ ಅವರು ಗೌರವಾಧ್ಯಕ್ಷತೆ ವಹಿಸಲಿದ್ದು, ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರೆಯ, ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ಬಜರಂಗದಳ ಪುತ್ತೂರು ಗ್ರಾಮಂತರ ಪ್ರಖಂಡದ ಸಂಯೋಜಕರಾದ ವಿಶಾಖ್ ಸಸಿಹಿತ್ಲು, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ, ಬಜರಂಗದಳ ಪುತ್ತೂರು ನಗರ ಪ್ರಖಂಡದ ಸಂಯೋಜಕ ಹರೀಶ್ ದೋಳ್ಪಾಡಿ, ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡದ ಕಾರ್ಯದರ್ಶಿ ರವಿ ಕುಮಾರ್ ಕೈತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.