Friday, January 24, 2025
ಸುದ್ದಿ

ತೆರೆ ಮೇಲೆ ಬರಲಿದ್ಯಂತೆ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಲವ್ ಸ್ಟೋರಿ.. – ಕಹಳೆ ನ್ಯೂಸ್

ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ವೈಯಕ್ತಿಕ ಜೀವನವನ್ನೆ ಸಿನೆಮಾ ಮಾಡುವ ಮೂಲಕ ಸಿನಿ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.. ಈ ಕಥೆಗೆ ನರೇಶ್ ನಾಯಕ ನಟನಾದರೆ, ಪವಿತ್ರಾ ಲೋಕೇಶ್ ನಾಯಕಿ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಡಿಸೆಂಬರ್ ತಿಂಗಳು 31ನೇ ತಾರೀಖು, ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿಡಿಯೋವೊಂದನ್ನ ಶೇರ್ ಮಾಡಿ ನಾವು ಹೊಸ ಜೀವನ ಆರಂಭಿಸ್ತಿದ್ದೇವೆ ಅಂತ ಅಫಿಶಿಯಲ್ ಆಗಿ ಅನೌನ್ಸ್ ಮಾಡಿದ್ದರು. ಯಾವುದೇ ಸಿನಿಮಾಗೂ ಕಮ್ಮಿ ಇಲ್ಲ ಎನ್ನುವಂತೆ ವಿಡಿಯೋ ಶೂಟ್ ಮಾಡಿಸಿ ಕಲ್ಯಾಣ ಕಥೆ ಹಂಚಿಕೊಂಡಿದ್ರು. ಆದ್ರೆ ವಿಡಿಯೋ ಶೂಟ್ ಇದೀಗ ಇವರಿಬ್ಬರ ಲವ್ ಸ್ಟೋರಿಯ ಬಗ್ಗೆ ಸಿನೆಮಾ ಶೂಟ್ ಮಾಡಿ ತೆರೆಮೇಲೆ ಬರೋಕೆ ಜೋಡಿಗಳು ರೆಡಿಯಾಗಿದ್ದಾರೆ.
ವೈಯಕ್ತಿಕ ವಿಚಾರಗಳಿಂದ ಭಾರಿ ಸದ್ದು ಮಾಡಿದ ನರೇಶ್ ಮತ್ತು ಪವಿತ್ರಾ ಲೋಕೇಶ್ ಕುರಿತು ಸಿನಿಮಾವೊಂದು ತಯಾರಾಗ್ತಿದೆ. ಇವರಿಬ್ಬರ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ರೊಮ್ಯಾಂಟಿಕ್ ಲವ್ ಸ್ಟೋರಿ ಮಾಡಲಾಗ್ತಿದ್ದು, ಈ ಕಥೆಯಲ್ಲಿ ಇವರಿಬ್ಬರೇ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರಂತೆ. ತಮ್ಮಿಬ್ಬರ ನಡುವೆ ಪರಿಚಯ ಹೇಗಾಯ್ತು? ತಮ್ಮ ಬಾಂಧವ್ಯ ಹೇಗೆ ಬೆಸೆಯಿತು? ಪ್ರೀತಿ ಹೇಗೆ ಶುರುವಾಯ್ತು? ಮದುವೆಯಾಗೋಕೆ ಯಾಕೆ ನಿರ್ಧರಿಸಿದ್ರು ಅನ್ನೋದನ್ನೇ ಸಿನಿಮಾ ಮಾಡ್ತಿದ್ದಾರಂತೆ.
ನರೇಶ್ ಮತ್ತು ಪವಿತ್ರಾ ಸಿನಿಮಾದಲ್ಲಿ ಬರಿ ಲವ್ ಸ್ಟೋರಿ ಮಾತ್ರ ಇರಲ್ಲ. ಇದರ ಜೊತೆ ಜೊತೆಗೆ ಕಳೆದ ಒಂದು ವರ್ಷದಿಂದ ತಮ್ಮ ಪರ್ಸನಲ್ ಲೈಫ್‌ನಲ್ಲಿ ನಡೆಯುತ್ತಿರುವ ವಿವಾದಗಳು ಇರಲಿದೆಯಂತೆ.
ನರೇಶ್ ಮತ್ತು ಅವರ ಪತ್ನಿ ರಮ್ಯಾ ರಘುಪತಿ ನಡುವಿನ ಗಲಾಟೆ, ಡಿವೋರ್ಸ್ ವಿಚಾರ, ಮೈಸೂರು ಹೋಟೆಲ್‌ನಲ್ಲಿ ನಡೆದ ಗಲಾಟೆ, ಜೀವ ಬೆದರಿಕೆ, ಬ್ಲಾಕ್‌ಮೇಲ್ ಆರೋಪ, ಆಡಿಯೋ ಲೀಕ್ ವಿಚಾರ ಹೀಗೆ ಪ್ರತಿಯೊಂದನ್ನ ಸೇರಿಸಿ ಕಮರ್ಷಿಯಲ್ ಪ್ಯಾಕೇಜ್ ಕೊಡೋ ಕೆಲಸ ಮಾಡ್ತಿದ್ದಾರಂತೆ.

ಇನ್ನು ಈ ಚಿತ್ರವನ್ನ ಎಂಆರ್ ರಾಜು ನಿರ್ದೇಶನ ಮಾಡ್ತಿದ್ದು, ಖುದ್ದು ನರೇಶ್ ನಿರ್ಮಿಸಿದ್ದಾರಂತೆ. ಇಷ್ಟು ದಿನ ಸೋಶಿಯಲ್ ಮೀಡಿಯಾ, ನ್ಯೂಸ್ ಚಾನಲ್‌ಗಳಲ್ಲಿ ಹೆಡ್‌ಲೈನ್ ಆಗಿದ್ದ ನರೇಶ್-ಪವಿತ್ರಾ ಪ್ರೇಮಕಥೆಯನ್ನ ಶೀಘ್ರದಲ್ಲೇ ಬಿಗ್ ಸ್ಕ್ರೀನ್‌ನಲ್ಲಿ ನೋಡಬಹುದು. ಈ ಚಿತ್ರದಲ್ಲಿ ಇಷ್ಟು ದಿನ ನೀವು ನಾವು ನೋಡಿದ ಕಥೆನಾ ಇರುತ್ತಾ? ಅಥವಾ ಯಾರಿಗೂ ಗೊತ್ತಿಲ್ಲದ ಅನ್‌ನೌನ್ ಫ್ಯಾಕ್ಟ್ ಏನಾದರೂ ತೋರಿಸ್ತಾರಾ ಕಾದು ನೋಡಬೇಕು.