Friday, January 24, 2025
ಸುದ್ದಿ

ಬಂಟ್ವಾಳ ಕೊಳ್ನಾಡು ಗ್ರಾಮದ ಕರೈ ಗುಡ್ಡಗಾಡು ಪ್ರದೇಶದಲ್ಲಿ ವ್ಯಾಪಿಸಿದ ಬೆಂಕಿ – ಕಹಳೆ ನ್ಯೂಸ್

ಕೊಳ್ನಾಡು : ಆಕಸ್ಮಿಕವಾಗಿ ಗುಡ್ಡಗಾಡು ಪ್ರದೇಶಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ನಡೆದಿದೆ. ಬೆಂಕಿಯೂ ರಸ್ತೆಯುದ್ದಕ್ಕೂ ಹರಡಿದ್ದು, ಸುಮಾರು ದೂರ ಆವರಿಸಿದೆ. ಸುತ್ತಲೂ ಪ್ರದೇಶದಲ್ಲಿ ದಡ್ಡ ಹೊಗೆ ಎದ್ದಿದ್ದು ಸ್ದಳೀಯರೆಲ್ಲ ಸೇರಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು, ಗುಡ್ಡ ಹೊತ್ತಿ ಉರಿಯುತ್ತಿದ್ದರೂ ಇನ್ನೋ ಸ್ಧಳಕ್ಕೆ ಆಗಮಿಸಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು