Thursday, January 23, 2025
ಸುದ್ದಿ

ಮಾಲ್ಡೀವ್ಸ್ ನಲ್ಲಿ ಸೀರೆಯುಟ್ಟು ಮಿಂಚಿದ ಕಾಂತಾರ ನಟಿ ಸಪ್ತಮಿ ಗೌಡ -ಕಹಳೆ ನ್ಯೂಸ್

ಕಾಂತಾರ ಸಿನೆಮಾದ ಮೂಲಕ ಮಿಂಚಿದ ನಟಿ ಸಪ್ತಮಿ ಗೌಡ ಮಾಲ್ಡೀವ್ಸ್ ನಲ್ಲಿ ಸಕತ್ ಎಂಜಾಯ ಮಾಡ್ತಾ ಇದ್ದಾರೆ. ಮಾಲ್ಡೀವ್ಸ್ ಗೆ ಹೊಗೋದು ಅಂದ್ರೆ ಅಲ್ಲಿ ಹಾಕೋ ಬಟ್ಟೆಗಳು ಕೂಡ ಅಷ್ಟೆ ಸ್ಟೈಲೀಶ್ ಆಗಿರುತ್ತೆ, ಆದ್ರೆ ಸಪ್ತಮಿ ಗೌಡ ತೊಟ್ಟಿರುವ ಬಟ್ಟೆ ಇದೀಗ ಎಲ್ಲ ದಿಲ್ -ಖುಷ್ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂತಾರ ಸಿನೆಮಾ ಸೂತ್ರದಾರಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಟಿ ಸಪ್ತಮಿ ಗೌಡ ಕಾಂತಾರ ಸಿನೆಮಾದ ಬಳಿಕ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿದ್ದಾರೆ. ಯಾವುದೇ ಕಾರ್ಯಕ್ರಮ ಇದ್ರೂ ರಿಷಬ್ ಶೆಟ್ಟಿ ಪ್ಯಾಂಟ್ ಬಿಟ್ಟು ಪಂಚೆ ಉಟ್ಟುಕೊಟ್ಟುಕೊಂಡು ಮಿಂಚಿದ್ರೆ, ಇತ್ತ ಸಪ್ತಮಿ ಗೌಡ ಮಾಡ್ರನ್ ಡ್ರೆಸ್ ಬಿಟ್ಟು ಸೀರೆ ಉಟ್ಟು ಅಭಿಮಾನಿಗಳು ಧ್ರಿಲ್ ಆಗೋವಂತೆ ಮಾಡ್ತಿದ್ದಾರೆ. ಇದಿಗ ಮಾಲ್ಡೀವ್ಸ್ ಗೆ ಭೇಟಿ ನೀಡಿದ ಈ ಮೂಗುತ್ತಿ ಸುಂದರಿ ಅಲ್ಲಿಯೂ ಸೀರೆಯಲ್ಲಿ ಮಿಂಚಿದ್ದಾರೆ. ಜೊತೆಗೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಪ್ತಮಿ ಗೌಡ ಮಾಲ್ಡೀವ್ಸ್ನಲ್ಲಿ ಅಪ್ಪಟ ಭಾರತೀಯ ನಾರಿಯಂತೆ ಕಾಣಿಸಿಕೊಂಡಿದ್ದಾರೆ. ಕೇಸರಿ ಬಣ್ಣದ ಸೀರೆ ಉಟ್ಟು, ಮಾಲ್ಡೀವ್ಸ್ ನಲ್ಲಿ ಆಕಾಶ ದೀಪವು ನೀನು..ನಿನ್ನ ಕಂಡಾಗ ಸಂತೋಷವೇನು ಅಂತ ಸೀ ವಾಕ್ ಮೇಲೆ ಸಪ್ತಮಿ ಗೌಡ ಹೆಜ್ಜೆ ಹಾಕಿದ್ದಾರೆ.

ಮಾಲ್ಡೀವ್ಸ್ಗೆ ಹೋದರೆ ಬೀಚ್‍ನಲ್ಲಿ ಬಿಕಿನಿ ತೊಟ್ಟು ಪೋಸ್ ಕೊಡುವ ಬಾಲಿವುಡ್ ನಟಿಯರ ಮಧ್ಯೆ ಸಪ್ತಮಿ ಸೀರೆಯುಟ್ಟು ಪೋಸ್ ಕೊಟ್ಟಿದ್ದಕ್ಕೆ ಅಭಿಮಾನಿಗಳಂತೆ ಮೆಚ್ಚುಗೆಯ ಸುರಿಮಳೆ ಸುರಿಸುತ್ತಿದ್ದಾರೆ.

‘ಕಾಂತಾರ’ ಸಿನಿಮಾ ಬಳಿಕ ಸಪ್ತಮಿ ಗೌಡ ನ್ಯಾಷನಲ್ ಲೆವೆಲ್‍ನಲ್ಲಿ ಮಿಂಚುತ್ತಿದ್ದು,. ಭಾರತದಾದ್ಯಂತ ಸಿನಿಪ್ರಿಯರಿಗೆ ಸಪ್ತಮಿ ಗೌಡ ಪರಿಚಯ ಆಗಿದೆ. ಮೆಗಾ ಬ್ಲಾಕ್‍ಬಸ್ಟರ್ ಸಿನಿಮಾ ಬಳಿಕ ಈ ನಟಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಸದ್ಯ ಅಭಿಷೇಕ್ ಅಂಬರೀಶ್ ಅಭಿನಯದ ‘ಕಾಳಿ’ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೆಲಸದ ಬಿಡುವಿನಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡುತ್ತಿದ್ದಾರೆ.