Thursday, January 23, 2025
ಸುದ್ದಿ

ಮಾ. 5ರಂದು ಪುಣಚ ನೀರುಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ವಾರ್ಷಿಕ ನೇಮ – ಕಹಳೆ ನ್ಯೂಸ್

ಪುಣಚ : ನೀರುಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ಜರುಗುವ ಶ್ರೀ ಕೋಟಿ ಚೆನ್ನಯ ಬೈದರ್ಕಳ ನೇಮೋತ್ಸವವು ಮಾ. 5ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ.26ರಂದು ಗೊನೆ ಮುಹೂರ್ತ ನಡೆದಿದ್ದು, ಮಾ.4ರ ಬೆಳಿಗ್ಗೆ ನಾಗತಂಬಿಲ, ರಾತ್ರಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನಡೆಯಲಿದೆ.

ಮಾ.5 ರಂದು ಗಣಪತಿ ಹೋಮ, ಶುದ್ಧ ಕಲಶಾದಿ ಹೋಮ, ತಂಬಿಲ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲ್ಲಿದ್ದು, ರಾತ್ರಿ ಶ್ರೀ ಬೈದರ್ಕಳ ಗರಡಿಯಲ್ಲಿ ಕೋಟಿ ಚೆನ್ನಯ ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಈ ಪುಣ್ಯ ಕಾರ್ಯಕ್ಕೆ ಭಕ್ತಾದಿಗಳು ಆಗಮಿಸಿ, ಧರ್ಮಕಾರ್ಯವನ್ನು ನೆರವೇರಿಸಿ, ಗಂಧ -ಪ್ರಸಾದ ಸ್ವೀಕರಿಸಿ ಶ್ರೀ ಬೈದರ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಲಾಗಿದೆ.