Wednesday, January 22, 2025
ಕ್ರೈಮ್ರಾಜಕೀಯರಾಷ್ಟ್ರೀಯಸುದ್ದಿ

ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಮಹಿಳಾ ಪ್ರದೇಶ ಕಾಂಗ್ರೆಸ್​​ ನಾಯಕಿ ಅರೆಸ್ಟ್..​​! – ಕಹಳೆ ನ್ಯೂಸ್

ಗುಜರಾತ್: ಕಾರಿನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ವಿದೇಶಿ ಮದ್ಯದ ಸರಕನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

10 ಲಕ್ಷ ರೂ. ಮೌಲ್ಯದ ಮದ್ಯವನ್ನು ಗುಜರಾತ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಜರಾತ್‌ನ ಮಹಿಳಾ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಉಪಾಧ್ಯಕ್ಷೆ ಮೇಘನಾ ಪಟೇಲ್ ಅವರನ್ನ ಬಂಧಿಸಿದ್ದಾರೆ.

ಪೊಲೀಸರ ದಾಳಿ ವೇಳೆ ಕಾರು ಚಾಲಕನನ್ನು ಹಿಡಿದು ವಿಚಾರಿಸಿದಾಗ ಮೇಘನಾ ಪಟೇಲ್‌ಗಾಗಿ 7.5 ಲಕ್ಷ ರೂ.ಗಳ ವಿದೇಶಿ ಸರಕನ್ನು ತರಲಾಗಿದೆ ಎಂಬುದು ತಿಳಿದುಬಂದಿತ್ತು. ಬಳಿಕ ಮೇಘನಾ ಪಟೇಲ್ ಅವರನ್ನು ಬಂಧಿಸಿ ಅವರ ಮೂಲಕ ಮತ್ತಷ್ಟು ಮದ್ಯ ವಶಪಡಿಸಿಕೊಳ್ಳಲಾಯಿತು. ಒಟ್ಟು 10 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡು ಆಕೆಯನ್ನು ಬಂಧಿಸಲಾಯಿತು ಎಂದು ಉಮ್ರಾ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.