Thursday, January 23, 2025
ಸುದ್ದಿ

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ಗೆ ಹಾರ್ಟ್ ಅಟ್ಯಾಕ್ : ಅಭಿಮಾನಿಗಳಿಗೆ ಶಾಕ್..! – ಕಹಳೆ ನ್ಯೂಸ್

ಮಾಜಿ ವಿಶ್ವ ಸುಂದರಿ, 90ರ ದಶಕದ ಬಳಿಕ ಬಾಲಿವುಡ್‌ನಲ್ಲಿ ಮಿಂಚಿದ ನಟಿ. ವಿವಿಧ ಪಾತ್ರಗಳ ಮೂಲಕ ಅಭಿಮಾನಿಗಳ ಮನಕದ್ದಿರೋ ಸುಶ್ಮಿತಾ ಸೇನ್ ಎರಡು ದಿನಗಳ ಹಿಂದೆ ತಮಗೆ ಹೃದಯಾಘಾತವಾಗಿತ್ತು ಅಂತಾ ತಮ್ಮ ಅನಾರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಂದೆ ಜೊತೆಗಿರುವ ಫೋಟೋ ಹಂಚಿಕೊಂಡ ಸುಷ್ಮಿತಾ, ಭಾವುಕ ಸಾಲುಗಳನ್ನು ಬರೆದಿದ್ದಾರೆ. ನಿಮ್ಮ ಹೃದಯವನ್ನ ಸದಾ ಸಂತೋಷದಿಂದ ಹಾಗೂ ಧೈರ್ಯವಾಗಿ ಇಟ್ಟುಕೊಳ್ಳಿ. ನಿಮಗೆ ಅಗತ್ಯವಿರುವಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ. ಇದು ನನ್ನ ತಂದೆಯ ಹಿತನುಡಿಗಳು. ಒಂದೆರಡು ದಿನಗಳ ಹಿಂದೆಯಷ್ಟೇ ನನಗೆ ಹೃದಯಾಘಾತ ಸಂಭವಿಸಿತ್ತು. ನನಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸ್ಟೆಂಟ್ ಅಳವಡಿಸಲಾಗಿದೆ. ಮುಖ್ಯವಾಗಿ, ನನ್ನ ಹೃದ್ರೋಗ ತಜ್ಞ ‘ನನಗೆ ದೊಡ್ಡ ಹೃದಯವಿದೆ’ ಎಂದು ದೃಢಪಡಿಸಿದ್ದಾರೆ. ನನ್ನ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಮತ್ತೆ ಜೀವನ ಸಾಗಿಸಲು ನಾನು ಸಿದ್ಧಳಾಗಿದ್ದೇನೆ. ನನ್ನ ಪ್ರೀತಿ ಪಾತ್ರರಿಗೆ ಈ ಗುಡ್ ನ್ಯೂಸ್ ತಿಳಿಸುವ ಸಲುವಾಗಿ ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ
ಸುಶ್ಮಿತಾ ಸೇನ್,
ನಟಿ ಸುಶ್ಮಿತಾ ಸೇನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡ್ತಿದ್ದಂತೆ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳೂ ಸುಶ್ಮಿತಾ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಶ್ಮಿತಾ ಸೇನ್ ತಿಳಿಸಿದ್ದರು. 2014 ರಿಂದ ನಾಲ್ಕು ವರ್ಷಗಳ ಕಾಲ ಸುಶ್ಮಿತಾ ಅಡಿಸನ್ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದರಂತೆ. ಹೀಗಂತ ಸ್ವತಃ ಅವರೇ ಹೇಳಿಕೊಂಡಿದ್ದರು. ಇದೀಗ ಹಾರ್ಟ್ ಅಟ್ಯಾಕ್ ಆಗಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿದುಬಂದಿದೆ.