Recent Posts

Friday, November 22, 2024
ಅಂತಾರಾಷ್ಟ್ರೀಯಕ್ರೈಮ್ಸುದ್ದಿ

ಮಹಿಳೆಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಎಸಗಿದ ಆರೋಪಿ ನೋಕೋಚಾ ಕಾಸ್ಮೀರ್ ಅರೆಸ್ಟ್..! – ಕಹಳೆ ನ್ಯೂಸ್

ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚನೆ ಎಸಗಿದ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ. ಬಂಧಿತನನ್ನು ನೋಕೋಚಾ ಕಾಸ್ಮೀರ್ ಇಕೆಂಬಾ ಎಂದು ಗುರುತಿಸಲಾಗಿದೆ. ಆರೋಪಿಯು, ಯುಕೆ ದೇಶದ ಶೆಲ್ ಆಯಿಲ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಹಾಕಿಸಿಕೊಂಡು ಅಮಾಯಕ ಜನರನ್ನು ಈತ ವಂಚಿಸುತ್ತಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಆರೋಪಿಯನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಫೆ. 11 ರಂದು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಮೂಲದ ಮಲ‌ರ್​ ಕೋಡಿ ಅವರಿಗೆ ಈಮೇಲ್ ಐಡಿಯಿಂದ ಯುಕೆ ದೇಶದಲ್ಲಿ ಸ್ಟಾಫ್​ ನರ್ಸ್ ಕೆಲಸ ಕೊಡಿಸುವುದಾಗಿ ಹೇಳಿ ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ಮಲರ್​ ಕೋಡಿ,

ಆರೋಪಿಯನ್ನು ಸಂಪರ್ಕಿಸಿದಾಗ ವಿವಿಧ ಶುಲ್ಕ ಹಾಗೂ ಕ್ಲಿಯರನ್ಸ್ ಫೀಜ್‌ಗಳೆಂದು ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಒಟ್ಟು 3 ಲಕ್ಷ ರೂ. ಅಧಿಕ ಹಣವನ್ನು ಹಾಕಿಸಿಕೊಂಡು ಯಾವುದೇ ಕೆಲಸ ಕೊಡಿಸದೆ ವಂಚಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಮಲಾರ್​ ಕೋಡಿ ಅವರು ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ, ಆರೋಪಿ ನೋಕೊಚಾ ಕಾಶ್ಮೀರ್ ಇಕೆಂಬಾನನ್ನು ಬಂಧಿಸಿದ್ದಾರೆ. ಆತನ ಬಳಿ ಕೃತ್ಯಕ್ಕೆ ಬಳಸಿದ್ದ ಸಿಮ್ ಕಾರ್ಡಗಳು, 6 ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್, 2 ಡೆಬಿಟ್ ಕಾರ್ಡ್​ ಹಾಗೂ ಪಾಸ್​ಪೋರ್ಟ್​ ಮುಂತಾದವುಗಳನ್ನು ವಶಕ್ಕೆ ಪಡೆಯಲಾಗಿದೆ.