Thursday, January 23, 2025
ಸುದ್ದಿ

ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ, ಬೆದರಿಕೆ – ಕಹಳೆ ನ್ಯೂಸ್

ಬ್ಯೂನಸ್ ಐರಿಸ್: ಅರ್ಜೇಂಟೀನಾ ತಂಡದ ಜನಪ್ರಿಯ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ ಮೇಲೆ ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ವಿಶ್ವಕಪ್ ವಿಜೇತ ನಾಯಕನಿಗೆ ಜೀವ ಬೆದರಿಕೆ ಸಂದೇಶವನ್ನು ಬರೆದಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ರೊಸರಿಯೋದಲ್ಲಿ ಮೆಸ್ಸಿ ಅವರ ಪತ್ನಿ ಆಂಟೊನೆಲ್ಲಾ ರುಕೂಝೊ ಕುಟುಂಬದ ಒಡೆತನದಲ್ಲಿರುವ ಯುನಿಕೋ ಸೂಪರ್ ಮಾರ್ಕೆಟ್ ಮೇಲೆ ಗುರುವಾರ ಬೆಳಿಗ್ಗೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಮೆಸ್ಸಿ ಅವರನ್ನು ಗುರಿಯಾಗಿಸಿ ದಾಳಿ ಏಕೆ ನಡೆಸಲಾಗಿದೆ ಎಂಬುದು ತಿಳಿದು ಬಂದಿಲ್ಲ. ಮೋಟಾರ್‌ಸೈಕಲ್‌ನಲ್ಲಿ ಆಗಮಿಸಿದ ಇಬ್ಬರು ಬಂದೂಕುಧಾರಿಗಳು ಕನಿಷ್ಠ 12 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಸಂದೇಶದಲ್ಲಿ ‘ಮೆಸ್ಸಿ, ನಾವು ನಿಮಗಾಗಿ ಕಾಯುತ್ತಿದ್ದೇವೆ’ ಎಂದು ಬರೆದಿಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು