Friday, January 24, 2025
ಸುದ್ದಿ

ಮೂಡುಬಿದಿರೆ: ಜಿ.ಕೆ. ಎಂಟರ್‌ ಪ್ರೈಸಸ್ ನ ಮಾಲಕ ಗಣೇಶ್ ಕಾಮತ್ ನಿಧನ -ಕಹಳೆ ನ್ಯೂಸ್

ಮೂಡುಬಿದಿರೆಯ ಜಿ.ಕೆ. ಎಂಟರ್‌ ಪ್ರೈಸಸ್ ಮಾಲಕ ಜಿ.ಕೆ. ಖ್ಯಾತಿಯ ಗಣೇಶ್ ಕಾಮತ್ ಇಂದು ನಿಧನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆಯಲ್ಲಿರುವ ತನ್ನ ಎಂಟರ್ ಪ್ರೈಸಸ್‌ಗೆ ಆಗಮಿಸುತ್ತಿದ್ದಾಗ ಹೃದಯದ ನೋವಿಗೊಳಗಾಗಿ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಕಾರ್ಕಳದ ಗಾಂಧಿ ಮೈದಾನದಲ್ಲಿ ಹಗಲು-ರಾತ್ರಿ ಕ್ರಿಕೆಟ್ ಪಂದ್ಯಾಟಕ್ಕಾಗಿ ಲೈಟಿಂಗ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿ ತನ್ನೆರಡು ಕೈಗಳನ್ನು ಕಳೆದುಕೊಂಡರೂ ಧೃತಿಗೆಡದೆ ತನ್ನದೇ ಆದ ಜಿ.ಕೆ. ಎಂಟರ್‌ ಪ್ರೈಸಸ್ ಉದ್ಯಮವನ್ನು ಪ್ರಾರಂಭಿಸಿದ್ದರು. ಉದ್ಯಮ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಪ್ರಸಿದ್ಧಿಯನ್ನೂ ಪಡೆದುಕೊಂಡಿತು.
ಮೃತರು ಪತ್ನಿ, ಓರ್ವ ಪುತ್ರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.