Friday, January 24, 2025
ಸುದ್ದಿ

ತನ್ನದಲ್ಲದ ತಪ್ಪಿಗೆ ದುರಂತ ಅಂತ್ಯ ಕಂಡ ಬೊಮ್ಮಲಿಂಗಪ್ಪ –ಕಹಳೆ ನ್ಯೂಸ್

ಚಿತ್ರದುರ್ಗದ ಜೋಡಿ ಚಿಕ್ಕೇನಹಳ್ಳಿ ಗೊಲ್ಲರಹಟ್ಟಿಯ ಪ್ರೇಮಜೋಡಿಯೊಂದು ಊರು ತೊರೆದಿದೆ. ಇದರ ಪರಿಣಾಮ ಯುವಕ ಮತ್ತು ಯುವತಿಯ ಕುಟುಂಬಗಳ ನಡುವೆ ಗಲಾಟೆ ಶುರುವಾಗಿದ್ದು, ಈ ವೇಳೆ ಗ್ರಾಮದ ಬೊಮ್ಮಲಿಂಗಪ್ಪ ಎಂಬಾತ ಗಲಾಟೆ ಬಿಡಿಸಿ ಬುದ್ದಿವಾದ ಹೇಳಿದ್ದಾನೆ. ಆದರೆ ಯುವತಿಯ ಪೋಷಕರಾದ ತಿಪ್ಪಯ್ಯ ಮತ್ತಿತರರು ಬೊಮ್ಮಲಿಂಗಪ್ಪ ಯುವಕ ಸಿದ್ದೇಶ ಕುಟುಂಬದ ಪರವಹಿಸಿದ್ದಾನೆಂದು ಭಾವಿಸಿ, ಆತನ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಅದಲ್ಲದೇ ಬೊಮ್ಮಲಿಂಗಪ್ಪನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು, ತಲೆ , ಎದೆ ಸೇರಿ ಗುಪ್ತಾಂಗ ಭಾಗಕ್ಕೆಲ್ಲಾ ಹೊಡೆದ ಪರಿಣಾಮ ಬೊಮ್ಮಲಿಂಗಪ್ಪ ತೀವ್ರ ಅಸ್ವಸ್ಥಗೊಂಡಿದ್ದನು. ಕೂಡಲೇ ಆತನನ್ನ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಬೊಮ್ಮಲಿಂಗಪ್ಪ ಕೊನೆಯುಸಿರೆಳೆದಿದ್ದಾನೆ. ಮೃತ ಬೊಮ್ಮಲಿಂಗಪ್ಪ ಪೈಪ್ ಲೈನ್ ಕೆಲಸ ಮಾಡಿಕೊಂಡು ತಾನಾಯ್ತು ತನ್ನ ಕೆಲಸವಾಯ್ತು ಎಂದು ಬದುಕಿದ್ದ ಸಜ್ಜನ ವ್ಯಕ್ತಿ. ಪುಟ್ಟ ಮಗುವಿನ ತಂದೆ ಆಗಿದ್ದ ಬೊಮ್ಮಲಿಂಗಪ್ಪ ತನ್ನದಲ್ಲದ ತಪ್ಪಿಗೆ ದುರಂತ ಸಾವಿಗೀಡಾಗಿದ್ದು, ಆತನ ಕುಟುಂಬ ಕಂಗಾಲಾಗಿದೆ. ಚಿತ್ರದುರ್ಗ ಎಸ್ಪಿ ಕೆ. ಪರಶುರಾಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು