Monday, November 25, 2024
ಸುದ್ದಿ

ಮರಾಠಿ ಕನ್ನಡವನ್ನು ಭೇಟಿಯಾದಾಗ ಏನಾಯ್ತು? ಭಾಷೆ ಅರ್ಥವಾಗದಿದ್ದರೂ ಭಾವನೆ ಅರ್ಥವಾಯ್ತು ನೋಡಿ…!- ಕಹಳೆ ನ್ಯೂಸ್

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅದನ್ನು ತಮ್ಮ ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಒಂದು ಅಂತ ಹೇಳಿಕೊಂಡ ಕಾಮಿಡಿಯನ್ ಶ್ರದ್ಧಾ ಜೈನ್ (Jain) ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದಷ್ಟೇ ಅಲ್ಲದೆ ಶ್ರದ್ಧಾ ಅವರು ಇತ್ತೀಚೆಗೆ ಯುಕೆ ಹಣಕಾಸು ಸಚಿವ ಜೆರೆಮಿ ಹಂಟ್ ಅವರನ್ನು ಸಹ ಭೇಟಿ ಮಾಡಿ ಅವರೊಡನೆ ಮಸಾಲ ದೋಸೆಯನ್ನು ತಿಂದಿದ್ದರು. ಶ್ರದ್ಧಾ ಅವರ ಕಾಮಿಡಿ ವೀಡಿಯೋ (Comedy Video) ಗಳಿಂದ ತುಂಬಾನೇ ಜನಪ್ರಿಯರಾಗಿದ್ದಾರೆ ಅಂತ ಹೇಳಬಹುದು. ಈ ಹಿಂದೆ ಅವರು ಟೆಕ್ ವಲಯದಲ್ಲಿ ನಡೆಯುತ್ತಿರುವ ಲೇ-ಆಫ್ ಗಳ ಬಗ್ಗೆ ಹಾಸ್ಯಸ್ಪದವಾಗಿ ಪಟಪಟನೆ ಮಾತಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಶ್ರದ್ದಾ ಅವರು ಹೊಸದಾದ ಒಂದು ಸ್ಕಿಟ್ ನೊಂದಿಗೆ ಬಂದಿದ್ದಾರೆ. ನಮ್ಮಲ್ಲಿ ಅನೇಕ ರೀತಿಯ ಭಾಷೆಗಳಿದ್ದು, ಈ ಭಾಷೆಗಳ ಅಡೆತಡೆಗಳು ಸಹ ತುಂಬಾನೇ ಇವೆ. ಆದರೂ ಸಹ ನಮ್ಮ ದೇಶದಲ್ಲಿ ಹೇಗೆ ಜನರು ಎದುರಿಗಿರುವವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಅಂತ ಒಂದು ಮೋಜಿನ ಸ್ಕಿಟ್ ಮಾಡಿ ಅದರ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ ಈ ಶ್ರದ್ದಾ. ಶ್ರದ್ದಾ ಹಂಚಿಕೊಂಡಿರುವ ವೀಡಿಯೋದಲ್ಲಿ ಏನಿದೆ? ಸಾಮಾಜಿಕ ಮಾಧ್ಯಮದಲ್ಲಿ ‘ಅಯ್ಯೋ ಶ್ರದ್ಧಾ’ ಎಂದು ಪ್ರಸಿದ್ಧರಾಗಿರುವ ಶ್ರದ್ದಾ ಜೈನ್ ಅವರು ಭಾಷೆಯ ಅಡೆತಡೆಗಳ ಹೊರತಾಗಿಯೂ ಭಾರತೀಯರು ಯಾವಾಗಲೂ ಪರಸ್ಪರ ಅರ್ಥಮಾಡಿಕೊಳ್ಳುವ ಮಾರ್ಗವನ್ನು ಹೇಗೆ ಕಂಡುಕೊಳ್ಳುತ್ತಾರೆ ಎಂಬುದನ್ನು ಒತ್ತಿ ಹೇಳುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕನ್ನಡ ಮಾತನಾಡುವ ಮಹಿಳೆಯೊಬ್ಬರು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಬಂದರೆ ಏನಾಗಬಹುದು ಎಂದು ಅವರು ಇದರಲ್ಲಿ ತೋರಿಸಿದ್ದಾರೆ ನೋಡಿ. ಇನ್‌ಸ್ಟಾಗ್ರಾಮ್ ನಲ್ಲಿ ವೀಡಿಯೋವನ್ನು ಹಂಚಿಕೊಂಡ ಅವರು “ಭಾರತೀಯರು ಯಾವಾಗಲೂ ಪರಸ್ಪರ ಅರ್ಥಮಾಡಿಕೊಳ್ಳಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ” ಎಂದು ಶೀರ್ಷಿಕೆಯನ್ನು ಸಹ ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು