Recent Posts

Sunday, January 19, 2025
ಸುದ್ದಿ

ವಿವೇಕಾನಂದ ಶಿಶುಮಂದಿರದಿಂದ ಶ್ರೀ ಕೃಷ್ಣ ಲೋಕ. ಸೆ.2ರಂದು ನಡೆಯಲಿರುವ ಕಾರ್ಯಕ್ರಮ ; 1300ಶ್ರೀ ಕೃಷ್ಣ ಯಶೋಧೆಯರ ನಿರೀಕ್ಷೆ – ಕಹಳೆ ನ್ಯೂಸ್

ಪುತ್ತೂರಿನ ವಿವೇಕಾನಂದ ಶಿಶು ಮಂದಿರದಲ್ಲಿ ಪ್ರತಿ ವರ್ಷ ನಡೆಯುವ ಶ್ರೀ ಕೃಷ್ಣ ಲೋಕ ಕಾರ್ಯಕ್ರಮವು ಸೆಪ್ಟಬಂರ್ 2ರಂದು ನಡೆಯಲಿದೆ ಎಂದು ಶ್ರೀ ಕೃಷ್ಣ
ಜನ್ಮಾಷ್ಟಮಿ ಅಧ್ಯಕ್ಷ ಡಾ.ಶೋಭಿತಾ ಸತೀಶ್ ರಾವ್ ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವೇಕಾನಂದ ವಿದ್ಯಾವರ್ಧಕ ಸಂಘದಅಡಿಯಲ್ಲಿ ಒಟ್ಟು 15 ಶಿಶು ಮಂದಿರಗಳು ನಡೆಯುತ್ತಿದ್ದು, ಅದರಲ್ಲಿ ಒಂದಾದವಿವೇಕಾನಂದ ಶಿಶು ಮಂದಿರ ಕಳೆದ29 ವರ್ಷಗಳಿಂದ ಶಿಶುಶಿಕ್ಷಣ ವಿಭಾಗಜೊತೆಗೂಡಿ ಶಿಶುಶಿಕ್ಷಣವನ್ನು ಬಾಲೋದ್ಯಾನ ಎನ್ನುವ ವಿಶಿಷ್ಟ ಶಿಕ್ಷಣ ಕ್ರಮದ ಮೂಲಕ ಮಾಡಿಕೊಂಡು ಬಂದಿದೆ. ಕಳೆದ 19 ವರ್ಷಗಳಿಂದ ವಿಜ್ರಂಭಣೆಯಿಂದಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಾರ್ವಜನಿಕ ಶ್ರೀಕೃಷ್ಣ ಲೋಕ ಸಮಿತಿ ಮತ್ತು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದೊಂದಿಗೆ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯವರು ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಶ್ರೀಕೃಷ್ಣ ಲೋಕ ಸಮಿತಿ ಗೌರವಾಧ್ಯಕ್ಷ ರಾಜಿ ಬಲರಾಮ್, ಪ್ರಧಾನ ಕಾರ್ಯದರ್ಶಿ ಇಂದಾಜೆ ಸುಲತಾ ವರದರಾಜ್ ನಾಯಕ್, ವಿವೇಕಾನಂದ ಶಿಶುಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರವಿನಾರಾಯಣ ಯಂ, ಕಾರ್ಯದರ್ಶಿ ಅಶೋಕ್ ಕುಂಭ್ಳೆ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು