Thursday, January 23, 2025
ಸುದ್ದಿ

ಆಟದ ಮೈದಾನವಿಲ್ಲದೆ ಶಾಲೆ ಇರುವಂತಿಲ್ಲ, ಶಾಲೆಯಲ್ಲಿ ಆಟದ ಮೈದಾನ ಕಡ್ಡಾಯ : ಸುಪ್ರೀಂಕೋರ್ಟ್‌ – ಕಹಳೆ ನ್ಯೂಸ್

ನವದೆಹಲಿ: ಆಟದ ಮೈದಾನವಿಲ್ಲದೆ ಶಾಲೆ ಇರುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಹರಿಯಾಣದ ಯಮುನಾ ನಗರದಲ್ಲಿರುವ ಶಾಲೆಯ ಆವರಣದ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕೋರ್ಟ್‌ ಆದೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಬಿ.ವಿ.ನಾಗರತ್ನ ಅವರಿದ್ದ ದ್ವಿಸದಸ್ಯ ನ್ಯಾಯಪೀಠವು, ‘ಶಾಲೆಯ ಭೂಮಿಯನ್ನು ಮಾರುಕಟ್ಟೆಯ ಬೆಲೆಗೆ ಅತಿಕ್ರಮಣದಾರರಿಗೆ ಮಾರಾಟ ಮಾಡಿ ಭೂಮಿಯನ್ನು ಸಕ್ರಮ ಮಾಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ 2016ರಲ್ಲಿ ಆದೇಶ ನೀಡಿರುವುದು ‘ಗಂಭೀರವಾದ ತಪ್ಪು’ ಎಂದು ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ ಆದೇಶವನ್ನು ವಜಾ ಮಾಡಿರುವ ಸುಪ್ರೀಂ ಕೋರ್ಟ್‌, ಅತಿಕ್ರಮಣ ಪ್ರದೇಶವನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಗೆ 12 ತಿಂಗಳು ಗಡುವು ನೀಡಿದೆ.