Thursday, January 23, 2025
ಸುದ್ದಿ

ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಮಾರ್ಚ್ 5ರಂದು ನಡೆಯಲಿದೆ ಶೌರ್ಯಯಾತ್ರೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಬಜರಂಗದಳ ಇದರ ಮುಂದಾಳತ್ವದಲ್ಲಿ ಇದೇ ಮಾರ್ಚ್ 5ರಂದು ವಿಶ್ವಹಿಂದೂ ಬಜರಂಗದಳ ಪುತ್ತೂರು ಇದರ ವತಿಯಿಂದ ಶೌರ್ಯ ಯಾತ್ರೆ ನಡೆಯಲಿದೆ. ದರ್ಬೆ ವೃತ್ತದಿಂದ ಆರಂಭಗೊಂಡು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಳಯದ ವರೆಗೆ ಶೌರ್ಯ ಯಾತ್ರೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡಲಿದ್ದು, ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿ ಶರಣ್ ಪಂಪ್ವ್‍ಲ್, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕ್ ಸುನಿಲ್ ಕೆ ಅರ್, ಮಂಗಳೂರು ವಿಭಾಗದ ವಿಭಾಗ ಸಂಯೋಜಕ್ ಭುಜಂಗ ಕುಲಾಲ್ ಹಾಗೂ ಮತ್ತಿತ್ತರರು ಭಾಗವಹಿಸಲಿದ್ದಾರೆ.