Recent Posts

Monday, January 20, 2025
ಸುದ್ದಿ

ಪ್ರಖ್ಯಾತ ಜೈನ ಮುನಿಶ್ರೀ ತರುಣ ಸಾಗರ ವಿಧಿವಶ ; ಜೈನ ಮಂದಿರದಲ್ಲೇ ಕೊನೆಯುಸಿರು – ಕಹಳೆ ನ್ಯೂಸ್

ನವದೆಹಲಿ, ಸೆಪ್ಟೆಂಬರ್ 01: ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಜೈನ ಮುನಿ ಶ್ರೀ ತರುಣ ಸಾಗರ ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದರು. ಅವರಿಗೆ 51 ವರ್ಷ ವಯಸ್ಸಾಗಿತ್ತು.

ದೆಹಲಿಯ ಕೃಷ್ಣ ನಗರದಲ್ಲಿರುವ ರಾಧಪುರಿ ಜೈನ್ ದೇವಾಲಯದಲ್ಲಿ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದರು.
ಬಹಳ ದಿನಗಳಿಂದ ಜಾಂಡೀಸ್ ನಿಂದ ಬಳಲುತ್ತಿದ್ದ ಅವರನ್ನು 20 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆರೋಗ್ಯ ತೀರಾ ಹದಗೆಟ್ಟಿದ್ದರೂ ಕಳೆದ ಎರಡು ದಿನಗಳಿಂದ ಔಷಧವನ್ನೂ ಸೇವಿಸದೆ ಇದ್ದರು. ಜೊತೆಗೆ ಜೈನ ಮಂದಿರಕ್ಕೆ ತಮ್ಮನ್ನು ಕರೆದೊಯ್ಯುವಂತೆ ಅವರೇ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಜೈನ ಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು. ಮಧ್ಯಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಜೂನ್ 26, 1967 ರಲ್ಲಿ ಜನಿಸಿದ ತರುಣ ಸಾಗರ ಅವರ ಮೂಲ ಹೆಸರು ಪವನ್ ಕುಮಾರ್ ಜೈನ್. 1981 ಮಾರ್ಚ್ 8 ರಂದು ಮನೆ ಬಿಟ್ಟು ಹೊರಬಂದ ಅವರು ಸನ್ಯಾಸ ಸ್ವೀಕರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದಿಗಂಬರ ಪಂಥದ ಅನುಯಾಯಿಯಾಗಿದ್ದ ತರುಣ ಸಾಗರ ಅವರಿಗೆ ಲಕ್ಷಾಂತರ ಜನ ಭಕ್ತರಿದ್ದರು. ಅವರ ನಿಧನಕ್ಕೆ ದೇಶದಾದ್ಯಮಟ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಅಂತ್ಯ ಸಂಸ್ಕಾರ ಉತ್ತರ ಪ್ರದೇಶದ ಮುರಾದ್ ನಗರದ ತರುಣಸಾಗರಂ ನಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು