Wednesday, January 22, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬೆಂಗಳೂರುರಾಜ್ಯಸುದ್ದಿ

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಮತ್ತೋರ್ವ ಆರೋಪಿ ಅರೆಸ್ಟ್ ; ಎನ್ಐಎ ಬಲೆಗೆ ಬಿದ್ದ ಇಸ್ಲಾಮಿಕ್ ಭಯೋತ್ಪಾದಕ, ಜಿಹಾದಿ ತುಫೈಲ್..! – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಉಂಟು ಮಾಡಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೋರ್ವ ಅರೋಪಿಯ ಬಂಧನಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬೆಂಗಳೂರಿನಲ್ಲಿ ಅರೋಪಿಯನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು ಮಡಿಕೇರಿ ಮೂಲದ ತುಫೈಲ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಆತನನ್ನು ಸೆರೆ ಹಿಡಿಯಲಾಗಿದೆ ಎಂದು ವರದಿ ತಿಳಿಸಿದೆ. 2022 ರ ಜುಲೈ 26 ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಪ್ರಸ್ತುತ ಎನ್‌ಐಎ ಪ್ರಕರಣದ ತನಿಖೆ ಮಾಡುತ್ತಿದೆ. ಈತನ ತಲೆಗೆ ಐದು ಲಕ್ಷ ರೂ ಇನಾಮು ಕಟ್ಟಲಾಗಿತ್ತು.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬಗ್ಗೆ ತನಿಖೆ ನಡೆಸಿದ್ದ ಎನ್ ಐಎ ಆರೋಪ ಪಟ್ಟಿ ಸಲ್ಲಿಸಿತ್ತು. 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ತನ್ನ ಅಜೆಂಡಾವನ್ನು ಬಲಪಡಿಸಲು ಸಮಾಜದಲ್ಲಿ ಅಶಾಂತಿ, ಭಯ ಹಾಗೂ ಕೋಮು ದ್ವೇಷವನ್ನು ಬಿತ್ತುವ ತನ್ನ ಉದ್ದೇಶದ ಭಾಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ತನ್ನ ‘ಶತ್ರುಗಳೆಂದು ಗ್ರಹಿಸಿದವರು’ ಮತ್ತು ಗುರಿಗಳನ್ನು ಕೊಲ್ಲುವ ಕಾರ್ಯಗಳನ್ನು ನಡೆಸುವ ಸಲುವಾಗಿಯೇ ಸರ್ವೀಸ್ ಟೀಮ್ಸ್ ಅಥವಾ ಕಿಲ್ಲರ್ ಸ್ಕ್ವಾಡ್‌ ಗಳೆಂದು ಕರೆಯುವ ರಹಸ್ಯ ತಂಡಗಳನ್ನು ರಚಿಸಿದೆ ಎಂದು ತನಿಖೆಯಿಂದ ಬಯಲಾಗಿದೆ.