2023ರ ಬಹುನಿರೀಕ್ಷಿತ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‍ಗೆ ನಿನ್ನೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ಆದ್ರೆ ಆರ್ ಸಿಬಿ ಆಟ ಇಂದಿನಿಂದ ಸ್ಟಾರ್ಟ್ ಆಗಲಿದೆ. ಉದ್ಘಾಟನಾ ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
2023ರ ಮಹಿಳಾ ಪ್ರೀಮಿಯರ್ ಲೀಗ್ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ ಎರಡು ಸ್ಥಳಗಳಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿಸಲಾಗುತ್ತದೆ.
ಗೆಲುವೇ ನಮ್ಮದು. ವುಮೆನ್ಸ್ ಪ್ರೀಮಿಯರ್ ಲೀಗ್‍ನಲ್ಲಿ ಸ್ಟ್ರಾಂಗೆಸ್ಟ್ ಆರ್‍ಸಿಬಿಯ ಸ್ಮೃತಿ ಮಂಧಾನ ಆ್ಯಂಡ್ ಟೀಮ್, ಇಂದು ಅಖಾಡಕ್ಕೆ ಧುಮುಕಲಿದೆ. ಫಸ್ಟ್ ಮ್ಯಾಚ್‍ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿಯಾಗಿದೆ. ಇವೆರಡು WPLನ ಸ್ಟ್ರಾಂಗೆಸ್ಟ್ ಟೀಮ್ಸ್. ಹೀಗಾಗಿ ಈ ಪಂದ್ಯದ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ.
ಇಂದು ಮಧ್ಯಾಹ್ನ 3.30ಕ್ಕೆ ಆರ್ ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಸ್ಮೃತಿ ಮಂಧಾನ ಬಳಗದಲ್ಲಿ ಟಿ20 ಸ್ಪೆಶಲಿಸ್ಟ್ ಗಳ ದಂಡೇ ಇದೆ.
ಇಂದಿನ ಮದಗಜಗಳ ಕಾದಾಟದ ಸೆಂಟರ್ ಆಫ್ ಅಟ್ರ‍್ಯಾಕ್ಷನ್ ಸ್ಮೃತಿ ಮಂದಾನ. ಕಿಂಗ್ ಕೊಹ್ಲಿ ಮೆನ್ಸ್ ಕ್ರಿಕೆಟ್‍ನ ರನ್ ಮಶೀನ್ ಆದ್ರೆ, ಮಂಧಾನ ವುಮೆನ್ಸ್ ಕ್ರಿಕೆಟ್‍ನ ರನ್ ಮಶೀನ್. ಇವರು ರನ್‍ಗಳಿಸೋದ್ರಲ್ಲಿ ಎಕ್ಸ್ಪರ್ಟ್. ಭಾರತ ತಂಡದ ಸ್ಟಾರ್ ಓಪನರ್ ಅನ್ನೋ ಹಣೆಪಟ್ಟಿ ಹೊತ್ತಿದ್ದಾರೆ. ಇನ್ನು ಮಂಧಾನ ಬಳಿಕ ತೂಫಾನ್ ಎಲಿಸ್ ಪೆರಿ ಕೂಡ ಆರ್ ಸಿಬಿ ತಂಡದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ತಂಡಕ್ಕೆ ಜೀವಾಳ. ಅದೆಂತಾ ಟಫ್ ಸಿಚೂವೇಶನ್ ಇರಲಿ. ಸ್ಪೋಟಕ ಬ್ಯಾಟಿಂಗ್ ಮತ್ತು ಇಂಪ್ರೆಸ್ಸಿವ್ ಸ್ಪೆಲ್ ಮೂಲಕ ಗೆಲುವು ದಕ್ಕಿಸಿಕೊಡಬಲ್ಲರು. ಈಗ ಈ ಜೋಡೆತ್ತು ಮಂಧಾನ-ಪೆರಿ ಕೂಡಿಕೊಂಡು ಡೆಲ್ಲಿ ಸಂಹಾರಕ್ಕೆ ಸರ್ವರೀತಿಯಲ್ಲೂ ಸಜ್ಜಾಗಿದ್ದಾರೆ.
ಇನ್ನು ಕ್ಯಾಪ್ಟನ್ ಮಂಧಾನ ಅಷ್ಟೇ ಅಲ್ಲದೇ ಮೂವರು ಮ್ಯಾಚ್ ವಿನ್ನರ್ ಭಾರತೀಯರ ಬಲ ಆರ್‍ಸಿಬಿ ತಂಡಕ್ಕಿದೆ. ರಿಚಾ ಘೋಶ್ ವಿಕೆಟ್ ಕೀಪಿಂಗ್ ಜೊತೆ ಫಿನಿಶಿಂಗ್ ಜವಾಬ್ದಾರಿ ಹೊರಲಿದ್ದಾರೆ. ರೇಣುಕಾ ಸಿಂಗ್ ಬೌಲಿಂಗ್ ಹಾಗೂ ಆಲ್‍ರೌಂಡರ್ ಶ್ರೇಯಾಂಕ ಪಾಟೀಲ್ ಬಲ ಕೂಡ ತಂಡಕ್ಕಿದೆ.