Thursday, January 23, 2025
ಸುದ್ದಿ

ನಂಬಲಾಗದ ದೃಶ್ಯ..! ಅಧ್ಬುತ ನೋಟ ಕಣ್ತುಂಬಿಕೊಳ್ಳಲು ವಿಮಾನವನ್ನು 360 ಡಿಗ್ರಿ ತಿರುಗಿಸಿದ ಪೈಲೆಟ್ – : ಕಹಳೆ ನ್ಯೂಸ್

ಬ್ರಿಟನ್‍ನ ವಿಮಾನ ಪೈಲಟ್ ಓರ್ವ ಆಗಸದಲ್ಲಿ ವಿಮಾನವನ್ನು 360 ಡಿಗ್ರಿ ತಿರುವು ಮಾಡುವ ಮೂಲಕ ಪ್ರಯಾಣಿಕರಿಗೆ ಅಲ್ಲಿನ ಅಮೋಘ ಬೆಳಕಿನ ದರ್ಶನ ಮಾಡಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಿಟನ್‍ನ ಉತ್ತರದ ತುದಿಯ ಶಿಖರಗಳು ದಿನಕಳೆದಂತೆ ವಿಶೇಷ ವರ್ಣದ ಬೆಳಕಿಗೆ ಬದಲಾಗುತ್ತದೆ. ಇಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದೊಂದು ಅದ್ಭುತ ಪ್ರಕೃತಿ ವಿಸ್ಮಯವಾಗಿರುತ್ತದೆ. ಇದೇ ಜಾಗದಲ್ಲಿ ಈಸಿಜೆಟ್ ವಿಮಾನದ ಪೈಲಟ್ ಆಗಸದಲ್ಲೇ 360 ಡಿಗ್ರಿ ತಿರುವು ಮಾಡುವ ಮೂಲಕ ವಿಮಾನದೊಳಗಿದ್ದ ಪ್ರಯಾಣಿಕರಿಗೆ ಸ್ಥಳೀಯ ಪ್ರಕೃತಿಯ ಅದ್ಭುತ ಸೌಂದರ್ಯದ ಸಂಪೂರ್ಣ ಪರಿಚಯ ಮಾಡುವ ಪ್ರಯತ್ನ ಮಾಡಿದ್ದು, ಅದರಲ್ಲಿ ಆತ ಯಶಸ್ಸು ಕೂಡ ಸಾಧಿಸಿದ್ದಾನೆ.

ಈ ಕುರಿತಂತೆ ಪ್ರಯಾಣಿಕರೊಬ್ಬರು ತಮ್ಮ ಅದ್ಭುತ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಉತ್ತರದ ಬೆಳಕಿನ ವರ್ಣರಂಜಿತ “ಅದ್ಭುತ ಪ್ರದರ್ಶನ” ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಪೈಲಟ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸೋಮವಾರ ಸಂಜೆ, ಐಸ್‍ಲ್ಯಾಂಡ್‍ನ ರೇಕ್‍ ಜಾವಿಕ್‍ನಿಂದ ಮ್ಯಾಂಚೆಸ್ಟರ್ ಏರ್‌ಪೋರ್ಟ್ ಗೆ U21806 ವಿಮಾನ ತೆರಳುತಿತ್ತು. ಈ ವೇಳೆ ವಿಮಾನದ ಪೈಲಟ್ ಪೈಲಟ್ ವೃತ್ತಾಕಾರದ ತಿರುವು (360 ಡಿಗ್ರಿ) ಮಾಡಲು ನಿರ್ಧರಿಸಿದ್ದಾನೆ. ನೋಡನೋಡುತ್ತಲೇ ಪ್ರಯಾಣಿಕರಿಗೆ ಈ ಕುರಿತು ಮುಂಜಾಗ್ರತಾ ಸಲಹೆಗಳನ್ನು ನೀಡಿ ನಂತರ ವಿಮಾನವನ್ನು 360 ಡಿಗ್ರಿ ತಿರುವು ಮಾಡಿಸುವ ಮೂಲಕ ಆಕಾಶ ಚಮತ್ಕಾರ ಬೆಳಕಿನ ಪ್ರದರ್ಶನ ಮಾಡಿಸಿದ್ದಾರೆ. ಕೆಲ ಪ್ರಯಾಣಿಕರು ವಿಮಾನದಿಂದಲೇ ಅದ್ಭುತ ಬೆಳಕಿನ ಚಮತ್ಕಾರದ ಚಿತ್ರಗಳನ್ನು ತೆಗೆದುಕೊಂಡಿದ್ದು, ಇದೇ ಫೋಟೋಗಳು ವ್ಯಾಪಕ ವೈರಲ್ ಆಗುತ್ತಿವೆ ಎಂದು ಈವ್ನಿಂಗ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಫ್ಲೈಟ್ ಟ್ರ‍್ಯಾಕಿಂಗ್ ಪ್ರಕಾರ ಏರ್‍ಬಸ್ A320 37,000ft (11,000m) ಎತ್ತರದಲ್ಲಿ ಮತ್ತು 500mphಗಿಂತ ಸ್ವಲ್ಪ ಕಡಿಮೆ ವೇಗದಲ್ಲಿ ಹಾರುತ್ತಿರುವಾಗ ಫರೋ ದ್ವೀಪಗಳ ಪಶ್ಚಿಮಕ್ಕೆ ನಿಯಂತ್ರಿತ ಅಡ್ಡದಾರಿಯು ಕೇವಲ 10 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಂಡಿತು ಮತ್ತು ರಾತ್ರಿ 8.30 ರ ನಂತರ ಇದು ಸಂಭವಿಸಿತು ಎಂದು Flightradar24.com ವೆಬ್‍ಸೈಟ್ ವರದಿ ಮಾಡಿದೆ.

BBC ಸುದ್ದಿಸಂಸ್ಥೆಯ ಪ್ರಕಾರ, ಚೆಷೈರ್‌ನ ಲಿಮ್ಮ್ ನ ಪ್ರಯಾಣಿಕ ಆಡಮ್ ಗ್ರೋವ್ಸ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, “ನಂಬಲಾಗದ” ದೃಶ್ಯವು ಅವರ ನಾಲ್ಕು ರಾತ್ರಿಯ ಪ್ರವಾಸವನ್ನು ಸ್ಮರಣೀಯವಾಗಿಸಿತು” ಎಂದು ಬರೆದುಕೊಂಡಿದ್ದಾರೆ.