Thursday, January 23, 2025
ಸುದ್ದಿ

ಬಾಲಿವುಡ್ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣ : ಜೈಲುಪಾಲಾಗಿದ್ದ ನಟ ಶೀಜಾನ್ ಖಾನ್ ಇಂದು ಬಿಡುಗಡೆ –ಕಹಳೆ ನ್ಯೂಸ್

ಬಾಲಿವುಡ್ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ಶೀಜಾನ್ ಖಾನ್‌ಗೆ ಕೊನೆಗೂ ಜಾಮೀನು ದೊರೆತಿದ್ದು, ಬರೊಬ್ಬರಿ ೩ ತಿಂಗಳ ಬಳಿಕ ನಟ ಜೈಲಿನಿಂದ ಹೊರಗ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಲಿಬಾಬಾ ದಸ್ತಾನ್ ಏಕ್ ಕಾಬೂಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಆಕೆಯ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಇದೀಗ ಸುಮಾರು ಮೂರು ತಿಂಗಳ ನಂತರ ಶೀಜನ್‌ಗೆ ರಿಲೀಫ್ ಸಿಕ್ಕಿದ್ದು, ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ಶೀಜಾನ್ ಖಾನ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಹೊರಗೆ ಬಂದ ಕೂಡಲೇ ಶೀಜನ್ ಮೊದಲು ತಂಗಿಯರನ್ನು ತಬ್ಬಿಕೊಂಡು ಭಾವುಕರಾದರು. ನಟನ ಕುಟುಂಬ ಸದಸ್ಯರು ಅವರನ್ನು ಬಿಡುಗಡೆ ಮಾಡಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದರು. ಅದರ ಫಲವಾಗಿ ಮಾರ್ಚ್ ೪, ೨೦೨೩ ರಂದು ಕೋರ್ಟ್ ಜಾಮೀನು ನೀಡಿತು. ಶಿಜಾನ್‌ನನ್ನು ಒಂದು ಲಕ್ಷ ರೂಪಾಯಿ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮುಂಬೈನ ಥಾಣೆ ಕೇಂದ್ರ ಕಾರಾಗೃಹದಿಂದ ಶೀಜಾನ್ ಖಾನ್ ಹೊರಗೆ ಬಂದಿದ್ದಾರೆ.