Wednesday, November 27, 2024
ಸುದ್ದಿ

ಅಂಜನಾದ್ರಿಯಲ್ಲಿ ಸೋಣ ಶನಿವಾರ ಆಚರಣೆ ; ಭಜನಾಮೃತಂ – ಕಹಳೆ ನ್ಯೂಸ್

ಅಡ್ಕಾರು: ಇಲ್ಲಿನ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯಲ್ಲಿ ಸಿಂಹ ಮಾಸ ಆಚರಣೆ ಪ್ರಯುಕ್ತ ಸೋಣ ಶನಿವಾರ ಆಚರಣೆ ಬಲಿವಾಡು ಕೂಟ ಶ್ರೀದೇವರಿಗೆ ಅಲಂಕಾರ ಪೂಜೆ ಕಾರ್ಯಕ್ರಮಗಳು ನಡೆಯಿತು. ಹಾಗೂ ಆಹ್ವಾನಿತ ಭಜನಾ ತಂಡಗಳ ಭಜನಾ ಸೇವೆಗಳು ಪ್ರತೀ ಶನಿವಾರ ನಡೆಯುತ್ತಿದ್ದು, ಸಿಂಹ ಮಾಸದ ಮೂರನೇ ಶನಿವಾರವಾಗಿರುವ ಈ ವಾರದ ಭಜನಾಮೃತಂ ಕಾರ್ಯಕ್ರಮವನ್ನು ಶ್ರೀ ಗುರುಗಣಪತಿ ಭಕ್ತ ಭಜನಾ ಮಂಡಳಿ, ಧರ್ಮಾರಣ್ಯ, ಸರಳಿಕುಂಜ, ಅರಂಬೂರು ಇದರ ಅಧ್ಯಕ್ಷ ಶ್ರೀ ವಿನೋದ್ ಸರಳಿಕುಂಜ, ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ನಾಯಕ್, ಕೋಶಾಧಿಕಾರಿ ಶ್ರೀ ವಿಜಯಕುಮಾರ್, ವಿಶೇಷ ಆಹ್ವಾನಿತರಾದ ಪ್ರಸಾದ್ ಬಾಯಾರು ಹಾಗೂ ಮುರಳಿ ವಿಟ್ಲ ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಶ್ರೀ ದೇವಳದ ಧರ್ಮದರ್ಶಿ ಮಂಡಳಿ ಸದಸ್ಯ ರವಿಪ್ರಸಾದ್ ನಾೈಕ್ ಕಜೆಗದ್ದೆ, ಭಜನಾ ಸಂಘದ ಸಂಚಾಲಕ ಶ್ರೀ ಜಯರಾಮ್ ಅಡ್ಕಾರು, ಖಜಾಂಜಿ ಜಯಂತ ಗೌಡ, ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಮಣಿಯಾಣಿ ಹಾಗೂ ಸಮಿತಿ ಸದಸ್ಯರು ಭಜನಾ ತಂಡಗಳಿಗೆ ತಾಳ ನೀಡುವುದರ ಮೂಲಕ ಚಾಲನೆ ನೀಡಿದರು. ಶ್ರೀ ಗುರುಗಣಪತಿ ಭಕ್ತ ಭಜನಾ ಮಂಡಳಿ, ಧರ್ಮಾರಣ್ಯ, ಸರಳಿಕುಂಜ, ಅರಂಬೂರು ತಂಡದ ಸದಸ್ಯರಿಂದ “ಭಜನಾಮೃತಂ” ಕಾರ್ಯಕ್ರಮ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೇವಾ ಸಮಿತಿ ಸದಸ್ಯ ಶ್ರೀ ಮಹಾದೇವ ಅಂಜನಾದ್ರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪುರೋಹಿತ ನಾಗರಾಜ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೂರಕ್ಕೂ ಮಿಕ್ಕಿ ಬಲಿವಾಡು ಸೇವೆ ನಡೆದಿದ್ದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ 600ಕ್ಕೂ ಮಿಕ್ಕಿ ಜನರಿಗೆ ಅನ್ನಸಂತರ್ಪಣೆ ನೆರವೇರಿತು. ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ದಯಾನಂದ ರೈ ಡಿಂಬ್ರಿಗುತ್ತು, ಗಣೇಶ್ ಭಟ್ ಸಂಪತ್ತಿಲ, ಭಾಸ್ಕರ, ರವಿಚಂದ್ರ, ಸರ್ವ ಸದಸ್ಯರು, ಸೇವಾ ಸಮಿತಿಯ ಅನೀಶ ಅಡ್ಕಾರು, ಸೀತಾರಾಮ ಆಳಂಕಳ್ಯ, ಲಕ್ಷ್ಮಣ ಅರ್ಭಡ್ಕ, ವಿವೇಕ್ ರೈ ಡಿಂಬ್ರಿಗುತ್ತು, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಸನ್ನುತಾ ಎಸ್. ರೈ, ಶ್ರೀಮತಿ ತಿರುಮಲೇಶ್ವರಿ, ಶ್ರೀಮತಿ ವೀಣಾ, ಭಜನಾ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು