ಹಿಂದೂಗಳಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಧರ್ಮಶಿಕ್ಷಣ ಅತ್ಯಾವಶ್ಯಕ : ಶ್ರೀ ಆನಂದ ಗೌಡ ಸನಾತನ ಸಂಸ್ಥೆ –ಕಹಳೆ ನ್ಯೂಸ್
ಬೆಳ್ತಂಗಡಿ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಮುರ ಶ್ರೀರಾಮ ಭಜನಾ ಮಂದಿರದಲ್ಲಿ ಸಾಯಂಕಾಲ 6 ಗಂಟೆಗೆ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಶ್ರೀ. ಆನಂದ ಗೌಡ ಇವರು ಮಾತನಾಡುತ್ತಾ , ಹಿಂದೆ ಭಾರತವು ಹಿಂದೂ ರಾಷ್ಟ್ರ ಆಗಿರುವಾಗ ಯಾವ ರೀತಿ ಪ್ರಗತಿಯಲ್ಲಿತ್ತು. ಭಾರತದ ರಾಜ ವೈಭವ ಹೇಗಿತ್ತು ? ಭಾರತದ ಆರ್ಥಿಕತೆ ಹೇಗಿತ್ತು? ಹೊರಗಿನ ದೇಶದ ವಿದ್ಯಾರ್ಥಿಗಳು ಭಾರತಕ್ಕೆ ಬಂದು ನಳಂದಾ, ತಕ್ಷಶಿಲೆ ವಿದ್ಯಾಲಯಗಳಲ್ಲಿ ಶಿಕ್ಷಣವನ್ನು ಪಡೆದು ಹೋಗುತ್ತಿದ್ದರು. ಆದರೆ ಈಗಿನ ಸ್ಥಿತಿ ಹೇಗಿದೆ ? ಭಾರತದಲ್ಲಿ ಜಾತ್ಯಾತೀತ ಸರಕಾರಗಳು ಬಂದು ಭಾರತ ಆರ್ಥಿಕತೆ ಇರಬಹುದು, ನೈತಿಕತೆಯಿರಬಹುದು, ಭಾರತೀಯ ಸಂಸ್ಕೃತಿ ಇರಬಹುದು, ಯಾವ ರೀತಿ ಅಧ:ಪತನ ಆಗಿದೆ ಎಂಬುದನ್ನು ಕಾಣಬಹುದು.
ಜಾತ್ಯಾತೀತ ಸರಕಾರದ ಕಾನೂನುಗಳು ಯಾವ ರೀತಿ ತಾರತಮ್ಯವನ್ನು ತೋರಿಸುತ್ತಿದೆ ಎಂಬುದರ ಬಗ್ಗೆ ಒಂದು ಉದಾಹರಣೆ ಕೊಡ್ತಿದ್ದೀನಿ. ನಮ್ಮ ಸಂವಿಧಾನದ ಆರ್ಟಿಕಲ್ 28ರಲ್ಲಿ ಪೂರ್ಣ ಸರಕಾರದ ಅನುದಾನದಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಹಾಗಿಲ್ಲ. ಆನಂತರ ಆರ್ಟಿಕಲ್ 30 ರಲ್ಲಿ ಅಲ್ಪಸಂಖ್ಯಾತರಿಗೆ ಮುಸಲ್ಮಾನರಿಗೆ ಮದರಸ ಹಾಗೂ ಕ್ರಿಶ್ಚನರಿಗೆ ಕಾನ್ವೆಂಟ್ ಗಳಲ್ಲಿ ಶಿಕ್ಷಣವನ್ನು ನೀಡಬಹುದು ಮತ್ತು ಅವರಿಗೆ ಅನುದಾನವನ್ನು ಕೊಡಬಹುದು. ಆದರೆ ಹಿಂದೂಗಳಿಗೆ ಆರ್ಟಿಕಲ್ 28ರದು ಮಾತ್ರ ಅನ್ವಯ ಆಗುತ್ತದೆ. ಇದು ಯಾವ ನ್ಯಾಯ ಇದಕ್ಕಾಗಿ ನಾವು ಇಂದು ನಮ್ಮ ಧರ್ಮದ ಅಸ್ತಿತ್ವಕ್ಕಾಗಿ ಹೋರಾಡಬೇಕಾಗಿದೆ. ಇಂತಹ ಹೋರಾಟವನ್ನು ಮಾಡಲು ಭಗವಂತನ ಅಧಿಷ್ಠಾನವಿರಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ, ಧರ್ಮ ಶಿಕ್ಷಣವನ್ನು ಪಡೆದು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯಕುಮಾರ್ ಮಾತನಾಡುತ್ತಾ ಇಂದು ಪ್ರಪಂಚದಾದ್ಯಂತ ಇತರ ಮತದವರಿಗೆ ಅವರದ್ದೇ ಆದ ದೇಶಗಳಿವೆ. ಉದಾಹರಣೆಗೆ 152 ಕ್ರೈಸ್ತ ದೇಶಗಳು, 52 ಇಸ್ಲಾಂ ದೇಶಗಳು, 02 ಬೌದ್ಧ ದೇಶಗಳು, 01 ಯಹೂದಿ ದೇಶ ಇದೆ. ಆದರೆ 150 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಇರುವ ಹಿಂದುಗಳಿಗೆ ಅವರದೇ ಆದ ದೇಶ ಇಲ್ಲ. ಭಾರತ ದೇಶ ಹಿಂದೂ ದೇಶವಾಗಿದ್ದರು ಅದು ಈಗ ಜಾತ್ಯಾತೀತ ದೇಶವಾಗಿದೆ. ಇತರ ಮತಿಯರು ಭಾರತವನ್ನು 2047 ನೇ ಇಸವಿಯಲ್ಲಿ ಇಸ್ಲಾಂ ರಾಷ್ಟ್ರ ಮಾಡ್ತೇವೆ ಎಂದು ಹೇಳುತ್ತಿದ್ದಾರೆ ಅಲ್ಲದೆ ಅವರು ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂ ಮುಖಂಡರ ಹತ್ಯೆ, ಲವ್ ಜಿಹಾದ್, ಮತಾಂತರ ,ಭಯೋತ್ಪಾದನೆ, ಭಾರತ ಆರ್ಥಿಕತೆಯನ್ನು ಬಡಮೇಲು ಮಾಡುವ ಹಲಾಲ್ ಜಿಹಾದ್,ಲ್ಯಾಂಡ್ ಜಿಹಾದ್ ಈ ರೀತಿ ಅವರ ಪ್ರಯತ್ನಗಳು ಆಗುತ್ತಿದ್ದರೂ ನಮ್ಮ ಹಿಂದೂಗಳು ಸ್ವಂತ ವಿಚಾರ ದಲ್ಲಿಯೇ ಮುಳುಗಿದ್ದೇವೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳನ್ನು ಮಾಡಿ ಹಿಂದುಗಳಿಗೆ ಆತ್ಮಸ್ಥೈರ್ಯವನ್ನು ತುಂಬಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಧರ್ಮಶಿಕ್ಷಣ. ಧರ್ಮ ಜಾಗೃತಿ, ಧರ್ಮ ರಕ್ಷಣೆ,ರಾಷ್ಟ್ರ ರಕ್ಷಣೆ ಕಾರ್ಯದಲ್ಲಿ ಹಿಂದುಗಳನ್ನು ಸಕ್ರಿಯ ಗೊಳಿಸಲಾಗುತ್ತಿದೆ ಎಂದು ಹೇಳಿದರು. ಈ ಸಭೆಯಲ್ಲಿ ಸುಮಾರು 110 ಜನ ಉಪಸ್ಥಿತರಿದ್ದರು