Monday, January 20, 2025
ಸುದ್ದಿ

ಬೆಟ್ಟಂಪಾಡಿ ನಿವಾಸಿಗೂ ಉಗ್ರರ ನಂಟು..! ಹಣಕಾಸಿನ ನೆರವು ನೀಡಿದ ಬೆಟ್ಟಂಪಾಡಿ ಇರ್ದೆ ನಿವಾಸಿ ಅಬ್ದುಲ್ ರಫಿಕ್.. : ಎನ್‍ಐಎ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು –ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಬಾಂಬ್ ಇಟ್ಟು ಸ್ಫೋಟಕ್ಕೆ ಯತ್ನಿಸಿದ ಉಗ್ರರಿಗೆ, ಬೆಟ್ಟಂಪಾಡಿ ಗ್ರಾಮದ ಇದ್ರೆ ಮನ್ನಾಪು ನಿವಾಸಿ ಅಬ್ದುಲ್ ರಫಿಕ್ ಹಣಕಾಸಿನ ನೆರವನ್ನ ನೀಡಿದ್ದಾನೆ ಅನ್ನೋದು ಇದೀಗ ಎನ್‍ಐಎ ತನಿಖೆಯಲ್ಲಿ ಬಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಹಾರದ ಪಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಂಬ್ ಇಟ್ಟು ಸ್ಪೋಟ ನಡೆಸಲು ಉಗ್ರ ಸಂಘಟನೆ ಸಂಚು ರೂಪಿಸಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಪೆÇಲೀಸರು ಹಾಗೂ ಎನ್‍ಐಎ ಬಾಂಬ್ ಬ್ಲಾಸ್ಟ್ನ ದೊಡ್ಡ ದುರಂತವನ್ನ ತಪ್ಪಿಸಿದ್ದಾರೆ.

ಬಾಂಬ್ ಸ್ಫೋಟಕ್ಕೆ ಯತ್ನಿಸಿದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್ ಐ ಎ ಬಂಟ್ವಾಳ, ಪುತ್ತೂರಿನಲ್ಲಿ ಹಲವು ಮನೆಗಳಿಗೆ ದಾಳಿ ನಡೆಸಿದೆ. ಈ ವೇಳೆ ಬೆಟ್ಟಂಪಾಡಿ ಗ್ರಾಮದ ಇದ್ರೆ ಮನ್ನಾಪು ನಿವಾಸಿ ಮೊಹಮ್ಮದ್ ಬ್ಯಾರಿಯ ಮಗ ಅಬ್ದುಲ್ ರಫಿಕ್ ಹಣಕಾಸಿನ ನೆರವನ್ನ ನೀಡಿದ್ದಾನೆ ಅನ್ನೋದು ಇದೀಗ ಎನ್‍ಐಎ ತನಿಖೆಯಲ್ಲಿ ಬಯಲಾಗಿದೆ.

ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್, ನೌಫಲ್ ಮನೆಗೆ ದಾಳಿ ನಡೆದಿದ್ದು, ಈ ಅರೋಪಿಗಳು ಪಾಟ್ನಾದ ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿ ಹಣಕಾಸಿನ ನೆರವು ಒದಗಿಸಿದ್ದಾರೆ ಎಂಬ ಆರೋಪದಲ್ಲಿ ದಾಳಿ ನಡೆದಿದೆ.