Recent Posts

Monday, January 20, 2025
ಸುದ್ದಿ

ಸನಾತನ ಸಂಸ್ಥೆಯ ನಿರ್ಬಂಧ ಖಂಡಿಸಿ ಮಂಗಳೂರಿನಲ್ಲಿ ಸೆಪ್ಟೆಂಬರ್ 4 ರಂದು (ಮಂಗಳವಾರ) ಬೃಹತ್ ಪ್ರತಿಭಟನಾ ಮೆರವಣಿಗೆ – ಕಹಳೆ ನ್ಯೂಸ್

ವಿಚಾರವಾದಿಗಳ ಹತ್ಯೆಯನ್ನು ಸನಾತನ ಸಂಸ್ಥೆಯ ಮೇಲೆ ಹೊರಿಸಿ ಅಪಪ್ರಚಾರ ಮಾಡುವ ಮೂಲಕ ಹಿಂದೂ ದ್ವೇಷವನ್ನು ಪ್ರಕಟಿಸುವ ವ್ಯವಸ್ಥಿತ ಷಡ್ಯಂತ್ರ್ಯವನ್ನು ಕೆಲವು ರಾಜಕೀಯ ಶಕ್ತಿಗಳು, ವಿಚಾರವಾದಿ ಸಂಘಟನೆಯವರು ಮಾಡುತ್ತಿದ್ದಾರೆ.

ಸನಾತನ ಸಂಸ್ಥೆಯು ಆಧ್ಯಾತ್ಮ ಮತ್ತು ಹಿಂದುತ್ವದ ಕ್ಷೇತ್ರದಲ್ಲಿ ಶ್ರೇಷ್ಠವಾದ ಕಾರ್ಯವನ್ನು ಮಾಡುತ್ತಿರುವುದರಿಂದಲೇ ಹಿಂದೂ ವಿರೋಧಿ ಶಕ್ತಿಗಳ ಕೆಂಗಣ್ಣಿಗೆ ಸಂಸ್ಥೆಯ ಕಾರ್ಯವು ಗುರಿಯಾಗಿದೆ. ಸಂಸ್ಥೆಯ ಮಾನಹಾನಿಯನ್ನು ಮಾಡಲು ವ್ಯವಸ್ಥಿತವಾಗಿ ಸಂಚನ್ನು ಹಿಂದೂ ವಿರೋಧಿಗಳು ರೂಪಿಸುತ್ತಿದ್ದಾರೆ. ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದ ಸನಾತನ ಸಂಸ್ಥೆಯ ಮೇಲಿನ ನಿಷೇಧದ ಬೇಡಿಕೆಯನ್ನು ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂಪರ ಸಂಘಟನೆಗಳ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲಾ ರಾಷ್ಟ್ರ ಹಾಗೂ ಧರ್ಮಪ್ರೇಮಿ ಬಾಂಧವರು ಅವಶ್ಯವಾಗಿ ಭಾಗವಹಿಸಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇವೆ.
ಆತ್ಮೀಯ ಪತ್ರಕರ್ತ ಹಾಗೂ ಮಾಧ್ಯಮ ಬಂಧುಗಳು ಈ ಕಾರ್ಯಕ್ರಮಕ್ಕೆ ಬಂದು ಉತ್ತಮ ರೀತಿಯಲ್ಲಿ ಪ್ರಸಿದ್ಧಿ ನೀಡಬೇಕಾಗಿ ವಿನಮ್ರ ವಿನಂತಿ.
ಸ್ಥಳ : ಜ್ಯೂಸ್ ಜಂಕ್ಷನ್ ಬಲ್ಮಠದಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ, ಮಂಗಳೂರು
ದಿನಾಂಕ : 4 ಸೆಪ್ಟೆಂಬರ್ 2018ನೇ ಮಂಗಳವಾರ
ಸಮಯ : ಮಧ್ಯಾಹ್ನ 3.30 ಗಂಟೆಗೆ

ಜಾಹೀರಾತು
ಜಾಹೀರಾತು
ಜಾಹೀರಾತು