Monday, January 20, 2025
ಸುದ್ದಿ

*ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ವಿವಿಧ ಕಾಮಗಾರಿಗಳು, ಉದ್ಘಾಟನೆ, ಗುದ್ದಲಿಪೂಜೆ ನೇರವೇರಿಸಿದ ಶಾಸಕ ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ಆಟದ ಮೈದಾನ ಉದ್ಘಾಟನೆ, ಅಮೃತ ಗ್ರಾಮ ಪುರಸ್ಕಾರ ಯೋಜನೆಯಡಿ 8 ಲಕ್ಷ ಹಾಗೂ 15 ನೇ ಹಣಕಾಸು ಯೋಜನೆಯಡಿ 2 ಲಕ್ಷ ಅನುದಾನದಲ್ಲಿ ಗ್ರಾಮದ 42 ಗುರುತಿಸಲಾದ ಪ್ರದೇಶಗಳಲ್ಲಿ ಸೋಲಾರ್ ಗ್ರಾಮವನ್ನಾಗಿಸುವ ಪರಿಕಲ್ಪನೆಯೊಂದಿಗೆ ಸೋಲಾರ್ ದಾರಿದೀಪಗಳಿಗೆ ಚಾಲನೆ, ಬಡಗ ಎಡಪದವು ಗ್ರಾಮ ಪಂಚಾಯತ್ ನಲ್ಲಿ ಇದೇ ಮೊದಲ ಬಾರಿಗೆ ನಿವೇಶನ ರಹಿತರಿಗೆ ನಿವೇಶನ ಒದಗಿಸಿ ಹಕ್ಕುಪತ್ರ ವಿತರಣೆ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬೈತರಿ ಇದರ ಕೆರೆಯನ್ನು ಅಭಿವೃದ್ಧಿಪಡಿಸಲು ಗುದ್ದಲಿಪೂಜೆಯನ್ನು ಶಾಸಕರಾದ ಡಾ| ಭರತ್ ಶೆಟ್ಟಿ ವೈ ಯವರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರಾಗಿರುವ ಡಾ| ಭರತ್ ಶೆಟ್ಟಿ ವೈ ಯವರು ಕಳೆದ ಐದು ವರ್ಷಗಳ ತಮ್ಮ ಸೇವಾವಧಿಯಲ್ಲಿ ಬಡಗ ಎಡಪದವು ಗ್ರಾಮ ಪಂಚಾಯತ್ ನಲ್ಲಿ ತಳಸ್ಪರ್ಶಿ ಕೆಲಸಗಳೊಂದಿಗೆ, ಸ್ಪಂದನೆಯೊಂದಿಗೆ, ಕಾರ್ಯಕರ್ತರೊಂದಿಗೆ, ಗ್ರಾಮಸ್ಥರೊಂದಿಗೆ, ಉತ್ತಮ ಭಾಂಧವ್ಯ ಹೊಂದಿರುವುದರಿಂದ ಗ್ರಾಮ ಪಂಚಾಯತ್ ನಲ್ಲಿ ದಾಖಲೆಯ ಅನುದಾನಗಳೊಂದಿಗೆ ಗ್ರಾಮದ ಸರ್ವಾಂಗಿಣ ಅಭಿವೃದ್ಧಿಯನ್ನು ಮಾಡಿರುತ್ತಾರೆ ಇವರಿಗೆ ಗ್ರಾಮಸ್ಥರ ಪರವಾಗಿ ಗೌರವಾಭಿನಂದನೆಯನ್ನು ಸಲ್ಲಿಸಲಾಯಿತು.

ಬಡಗ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕೆ.ವಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಯಾಗಿ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ, ಉಪತಹಶೀಲ್ದಾರರಾದ ಶಿವಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ, ಗ್ರಾಮ ಅಧಿಕಾರಿಯಾದ ಪವಿತ್ರ, ಉಪಾಧ್ಯಕ್ಷರಾದ ಯಶೋಧ, ಪಂಚಾಯತ್ ಕಾರ್ಯದರ್ಶಿ ಲಕ್ಷಣ್, ಪಂಚಾಯತ್ ಸದಸ್ಯರಾದ ಚಂದ್ರಹಾಸ್, ವಸಂತ್, ವರುಣ್, ಪ್ರದೀಪ್, ಶ್ರೀಲತಾ, ಮೋಹಿನಿ, ಮಾಜಿ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ, ಲಲಿತಾ ಶೆಟ್ಟಿಗಾರ್, ಶಕ್ತಿ ಕೇಂದ್ರ ಪ್ರಮುಖ್ ತಾರನಾಥ ಸಫಳಿಗ, ಪ್ರಸಾದ್ ಎಡಪದವು, ತಾರನಾಥ ಸಾಲ್ಯಾನ್, ರಘವೀರ್, ಉಮನಾಥ, ಪ್ರವೀಣ್ ಸಫಳಿಗ, ರಮೇಶ್ ಶೆಟ್ಟಿ, ಯಾದವ ಶೆಟ್ಟಿಗಾರ್, ಗೋಪಾಲ್ ಪೂಜಾರಿ, ಜಯನಂದ ಬೆಟ್ಟು, ವೆಂಕಟರಮಣ ತಂತ್ರಿ, ಗುರುರಾಜ್ ತಂತ್ರಿ, ಅಜೇಯ ಫ್ರೆಂಡ್ಸ್ ಕ್ಲಬ್ ಸದಸ್ಯರು, ಭಾರ್ಗವ ಮಿತ್ರ ವೃಂದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಉಪಸ್ಥಿತರಿದ್ದರು.