Recent Posts

Monday, January 20, 2025
ಸುದ್ದಿ

ಹವಾ ಎಬ್ಬಿಸೋಕೆ ಸಜ್ಜಾಗಿದೆ ‘ಸರ್ಕಸ್’..: ಜೂನ್ 23ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ ಬಿಗ್ ಬಾಸ್ ವಿನ್ನರ್ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯದ ಸಿನೆಮಾ – ಕಹಳೆ ನ್ಯೂಸ್

ತುಳುನಾಡಿನಲ್ಲಿ ಸರ್ಕಸ್ ಹವಾ ಎಬ್ಬಿಸೋಕೆ ಸಜ್ಜಾಗಿದ್ದು, ಸದ್ಯದಲ್ಲೆ ನಿಮ್ಮೂರಲ್ಲೂ ಸರ್ಕಸ್ ಪ್ರದರ್ಶನಗೊಳ್ಳಲಿದೆ. ಸರ್ಕಸ್ ಬರ‍್ತಾ ಇದ್ಯಾ..? ಯಾವಾಗ.. ಎಲ್ಲಿ ಮಾರ‍್ರೆ ಅಂತಿದ್ದೀರಾ.. ಇದು ಅಂತಿಂತ ಸರ್ಕಸ್ ಅಲ್ಲ.. ಒಂದೊಳ್ಳೆ ಸ್ಟೋರಿ ಜೊತೆಗೆ, ನಿಮ್ಮನ್ನ ನಕ್ಕುನಗಿಸಿ, ಫುಲ್ ಎಂಟಟೈನ್‌ಮೆಂಟ್ ಮಾಡೋದಿಕ್ಕೆ ಬರ‍್ತಾ ಇರೋ ತುಳು ಸಿನೆಮಾ ಸರ್ಕಸ್.. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ಸನ್ನಿದಿಯ ಪುಣ್ಯ ಮಣ್ಣಿನಲ್ಲಿ ನಡೆದ ಮಖೆ ಜಾತ್ರೆಯ ಉಬಾರ್ ಉತ್ಸವದಲ್ಲಿ ಚಿತ್ರ ಬಿಡುಗಡೆಯ ಬಗ್ಗೆ ಗುಡ್‌ನ್ಯೂಸ್ ನೀಡಿದ್ದಾರೆ ತುಳುವ ಸ್ಟಾರ್,, ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ..
ಎಸ್ ತುಳುನಾಡಿನ ರಾಕ್‌ಸ್ಟಾರ್, ಕನ್ನಡ ಬಿಗ್‌ಬಾಸ್ ಒಟಿಟಿ ಹಾಗು ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ತುಳು ಸಿನೆಮಾ “ಸರ್ಕಸ್ ಜೂನ್ 23’ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತುಳುನಾಡಿನಲ್ಲಿ ದೊಡ್ಡ ಮಟ್ಟದ ಗಿರ್‌ಗಿಟ್ ತಿರುಗಿಸಿ ಬಳಿಕ ದೇಶ ವಿದೇಶದಲ್ಲೂ ಗಿರಗಿರನೇ ಗಿರ್‌ಗಿಟ್ ಸುತ್ತೋವಂತೆ ಮಾಡಿ, ಸಿನಿ ಪ್ರಿಯರಿಗೆ ನಗುವಿನ ಕಚಕುಳಿಯ ಎಂಟಟೈನ್‌ಮೆಂಟ್ ಕೊಟ್ಟ ಸಿನೆಮಾ ಅಂದ್ರೆ ಅದು ಗಿರ್‌ಗಿಟ್. ಈ ಸಿನೆಮಾದ ಮುಖ್ಯ ಪಾತ್ರದಾರಿ ಸೂತ್ರದಾರಿ ಅಂದ್ರೆ ಅದು ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ.. ಇದೀಗ ತುಳುನಾಡಿನ ಕುವರನ ಭತ್ತಳಿಕೆಯಿಂದ ಸರ್ಕಸ್ ಸಿನೆಮಾ ತೆರೆ ಕಾಣೋದಿಕ್ಕೆ ತಯಾರಾಗಿದೆ.

ರೂಪೇಶ್ ಶೆಟ್ಟಿ ಅವರ ನಟನೆ ನಿರ್ದೇಶನ ಹಾಗೂ ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್, ಮಂಜನಾಥ್ ಅತ್ತಾವರ್ ನಿರ್ಮಾಣದಲ್ಲಿ ಸರ್ಕಸ್ ಚಿತ್ರ ಮೂಡಿಬಂದಿದೆ. ಸಿನಿ ರಸಿಕರನ್ನ ನಕ್ಕುನಗೊಸೋದಿಕ್ಕಾಗಿ ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರಿ, ಸಾಯಿ ಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಹೀಗೆ ತುಳು ದಿಗ್ಗಜರ ದಂಡೇ ಸರ್ಕಸ್ ಚಿತ್ರದಲ್ಲಿದೆ. ಕನ್ನಡ ಸಲಗ ಚಿತ್ರ ಖ್ಯಾತಿಯ ಯಶ್ ಶೆಟ್ಟಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ತುಳುವಿನಲ್ಲಿ ಅಭಿನಯಿಸುತ್ತಿದ್ದಾರೆ. ಲೋಯ್ ಅವರ ಸಂಗೀತ ಈ ಚಿತ್ರಕ್ಕಿದೆ. ಗಿರಿಗಿಟ್ ಖ್ಯಾತಿಯ ಪ್ರಸನ್ನ ಬೈಲೂರು ಇಲ್ಲಿ ಸಂಭಾಷಣೆ ಬರೆದಿದ್ದಾರೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ, ನಿರಂಜನ್ ದಾಸ್ ಕ್ಯಾಮರಾ, ರಾಹುಲ್ ವಸಿಸ್ಟ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.

ರೂಪೇಶ್ ಶೆಟ್ಟಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟು, ಜಭರ್ದಸ್ತ್ ಆಗಿ ಆಡಿ, ಗೆದ್ದ ಬಳಿಕ ಅಭಿಮಾನಿಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು ಬೆಳೆದಿದೆ. ಶೆಟ್ರು ಕೂಡ ಅಭಿಮಾನಿಗಳ ಉತ್ಸಾಹ, ತುಂಬು ಪ್ರೀತಿಗೆ ಸದಾ ಚಿರಋಣಿ ಎಂದು ನಗುಮೊಗದಿಂದಲೇ ಹೇಳ್ತಾ ಬಂದಿದ್ದಾರೆ. ಸಿನೆಮಾ ಕ್ಷೇತ್ರದ ಭರವಸೆಯ ನಾಯಕನಾಗಿ ಬೆಳೆದು ನಿಂತಿದ್ದಾರೆ.
ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಬಿಗ್‌ಬಾಸ್ ಗೆದ್ದು ಬಂದ ಬಳಿಕ ಬಿಡುಗಡೆಗೊಳ್ಳುತ್ತಿರುವ ಮೊದಲ ಸಿನೆಮಾ ಇದಾಗಿದ್ದು, ಜೂನ್ 23ರಂದು ಚಿತ್ರ ಮಂದಿರಕ್ಕೆ ಲಗ್ಗೆ ಇಡಲಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕುದಾಗಿ ಸದಾ ಹೊಸತನ ಹಾಗೂ ಫುಲ್ ಕಾಮಿಡಿ ಇರೋ ಸಿನೆಮಾಗಳನ್ನ ಮಾಡ್ತಾ ಇರುವ ರೂಪೇಶ್ ಶೆಟ್ಟಿ ಇದೀಗ ಮತ್ತೆ ಹೊಸ ಲುಕ್‌ನಲ್ಲಿ ನಿಮ್ಮ ಮುಂದೆ ಬರಲಿದ್ದಾರೆ. ನಮ್ಮೂರಿನ ಹುಡುಗ ನಟನಾಗಿ ಮಿಂಚ್ತಾ ಇದ್ದಾರೆ.. ನಾವೆಲ್ಲ ಸೇರಿ ಸಪೋರ್ಟ್ ಮಾಡೊಣ,, ಸಿನೆಮಾ ನೋಡಿ ಹರಸಿ ಹಾರೈಸೋಣ..