Recent Posts

Monday, January 20, 2025
ಸುದ್ದಿ

ಯುವತಿಯ ಪ್ರಾಣವನ್ನೇ ಬಲಿ ತೆಗೆದುಕೊಂಡ ಹೇರ್ ​ಸ್ಟ್ರೈಟ್ನಿಂಗ್‌ – ಕಹಳೆ ನ್ಯೂಸ್

ಕೊಡಗು, ಸೆ 02 : ಹೇರ್‌ ಸ್ಟ್ರೈಟ್ನಿಂಗ್‌ ಮಾಡಿಸಿಕೊಂಡು ಅದರ ಅಡ್ಡಪರಿಣಾಮವಾಗಿ ಕೂದಲು ಉದುರತೊಡಗಿದಾಗ ಆತಂಕಕ್ಕೆ ಒಳಗಾದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕೊಡಗು ಜಿಲ್ಲೆಯ ಕೊಟ್ಟಗೇರಿಯಲ್ಲಿ ನಡೆದಿದೆ. ೧೯ ವರ್ಷದ ನೇಹಾ ಗಂಗಮ್ಮ ಆತ್ಮಹತ್ಯೆಗೆ ಒಳಗಾದವಳು.

ನೇಹಾ ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಈಕೆ ಕೆಲವು ದಿನಗಳ ಹಿಂದೆ ವಿ.ವಿ.ಮೊಹಲ್ಲಾದ ರೋಹಿಣಿ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಹೇರ್‌ ಸ್ಟ್ರೈಟ್ನಿಂಗ್‌ ಮಾಡಿಸಿಕೊಂಡಿದ್ದಳು. ಹೇರ್‌ ಸ್ಟ್ರೈಟ್ನಿಂಗ್‌ ಮಾಡಿಸಿಕೊಂಡ ಕೆಲ ದಿನಗಳ ಬಳಿಕ ನೇಹಾ ಕೂದಲು ಭಾರೀ ಪ್ರಮಾಣದಲ್ಲಿ ಉದುರತೊಡಗಿದೆ. ಇದರಿಂದ ಕಂಗಲಾದ ನೇಹಾ ತನ್ನ ಸ್ವಂತ ಊರಾದ ವಿರಾಜಪೇಟೆಯ ಕೊಟ್ಟಗೇರಿಗೆ ಬಂದು ಹೆತ್ತವರೊಂದಿಗೆ ನೋವು ತೊಡಿಕೊಂಡಿದ್ದಾಳೆ. ಕಾಲೇಜಿಗೆ ಹೋಗಲ್ಲ ಎಂದ ಮಗಳನ್ನು ಪೋಷಕರು ಬುದ್ದಿಮಾತು ಹೇಳಿ ಕಳುಹಿಸಿಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೂದಲುದುರುವಿಕೆಯ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋದ ನೇಹಾ ಕಾಲೇಜಿಗೂ ರಜೆ ಮಾಡಿ ಪಿಜಿಯಲ್ಲೇ ಉಳಿದುಕೊಂಡಿದ್ದಾಳೆ. ಕೊನೆಗೆ ದಾರಿ ಕಾಣದೆ ಆಗಸ್ಟ್ ೨೮ ರಂದು ಕೊಟ್ಟಗೇರಿ ದಾರಿ ಮದ್ಯದಲ್ಲಿರುವ ಮಲ್ಲೂರು ಸಮೀಪದ ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯೋ ಮುನ್ನಾ ಆಕೆ ರೋಹಿಣಿ ಬ್ಯೂಟಿ ಪಾರ್ಲರ್ ಗೆ ಕರೆಮಾಡಿದ್ದಳು ಎಂದು ತಿಳಿದುಬಂದಿದೆ. ಸಮೀಪದಲ್ಲಿರುವ ಬಾಳೆಲೆಯ ಲಕ್ಷ್ಮಣ ತೀರ್ಥ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾಳೆ.ಇತ್ತ ಕಡೆ ಮನೆಯವರು ಮಗಳು ಪಿಜಿಯಲ್ಲೂ ಸಂಪರ್ಕಕ್ಕೆ ಸಿಗದಿದ್ದಾಗ ಹುಡುಕಾಟಕ್ಕಿಳಿದಿದ್ದಾರೆ. ಮೈಸೂರಿನ ಜಯಲಕ್ಷ್ಮಿ ಪುರಂ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು. ಆದರೆ ಇಂದು ಮೃತ ದೇಹ ನದಿಯಲ್ಲಿ ಪತ್ತೆಯಾಗಿದ್ದು , ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊನ್ನಂಪೇಟೆ ಪೋಲಿಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದ್ದ ಒಬ್ಬ ಮಗಳನ್ನ ಕಳೆದುಕೊಂಡ ತಂದೆ ಪೆಮ್ಮಯ್ಯ ತಾಯಿ ಶೈಲಾಗೆ ಆಕಾಶವೇ ಕಳಚಿಬಿದ್ದಂತಾಗಿದ್ದು. ತನ್ನ ಮಗಳ ಸಾವಿಗೆ ಕಾರಣವಾದ ಮೈಸೂರಿನ ರೋಹಿಣಿ ಬ್ಯೂಟಿ ಪಾರ್ಲರ್ ಝೋನ್ ನ ಮಾಲೀಕರಿಗೆ ಶಿಕ್ಷೆ ಕೊಡಿಸಿ, ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ನೇಹಾ ಪೋಷಕರು ಆಳಲು ತೋಡಿಕೊಂಡಿದ್ದಾರೆ.