Recent Posts

Monday, January 20, 2025
ಸುದ್ದಿ

ಪತ್ನಿಯ ಕೈಗಳನ್ನು ಕತ್ತರಿಸಿ ಪೈಶಾಚಿಕ ಕೃತ್ಯ ಎಸಗಿದ ಪಾಪಿ ಪತಿ…!! –ಕಹಳೆ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಪತ್ನಿಯ ಕೈಗಳನ್ನು ಕತ್ತರಿಸಿ ಪತಿ ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ನಿ ಚಂದ್ರಕಲಾ(45) ಕೈಗಳನ್ನು ಕತ್ತರಿಸಿ ಪತಿ ಮುನಿಕೃಷ್ಣಪ್ಪ ವಿಕೃತಿ ಮೆರೆದಿದ್ದಾನೆ. ಚಂದ್ರಕಲಾ ಮತ್ತು ಮುನಿಕೃಷ್ಣಪ್ಪ ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದ್ರೂ ಮನೆಯಲ್ಲಿ ಪ್ರತಿನಿತ್ಯವೂ ಜಗಳ ನಡೆಯುತ್ತಿತ್ತು. ಹಾಗಾಗಿ ಜಗಳದಿಂದ ಬೇಸತ್ತ ಚಂದ್ರಕಲಾ ಮೂರು ತಿಂಗಳ ಹಿಂದೆ ಗಂಡನನ್ನು ಬಿಟ್ಟು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿದ್ದರು.

ಚಂದ್ರಕಲಾ ಹಾಗೂ ಆಕೆಯ ಮಗಳು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದರು. ಚಂದ್ರಕಲಾ ಕೆಲಸಕ್ಕೆ ಹೋಗಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಗಂಡ ಅಟ್ಟಹಾಸ ಮೆರೆದಿದ್ದಾನೆ. ಮಚ್ಚಿನಿಂದ ಚಂದ್ರಕಲಾಳ ಎರಡು ಕೈಗಳನ್ನು ಕತ್ತರಿಸಿದ್ದಾನೆ. ಹಲ್ಲೆಗೊಳಗಾದ ಚಂದ್ರಕಲಾಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.