Friday, November 29, 2024
ಸುದ್ದಿ

ಮುಸ್ಲಿಂ ಯುವಕರ ನಡುವೆ ಮಾರಾಮಾರಿ; ‘’ನಿಂಡೆ ಕೊಲ್ಲಂಡೆ ಬುಡ್ಲೆʼʼ ಅಮಾಯಕ ಹುಡುಗನಿಗೆ ಹಲ್ಲೆ, ಜೀವ ಬೆದರಿಕೆ..! –ಕಹಳೆ ನ್ಯೂಸ್

ರಸ್ತೆ ಬದಿಯಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಯುವಕನ ಮೇಲೆ ಕ್ಷಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ ಘಟನೆ ವಿಟ್ಲದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ. ಕಂಬಳಬೆಟ್ಟು ದರ್ಗಾದ ಬಳಿ ಮಹಮ್ಮದ್ ಅನ್ವರ್ ಎಂಬ ಯುವಕ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ರಾಬಿ, ಸಿಯಾನ್, ಸಿನಾನ್ ಎಂಬವರು ಫೋನ್‌ನಲ್ಲಿ ಮಾತನಾಡುತ್ತಿದ್ದ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನನಗೆ ನಿಮಗೆ ಗುರುತು ಪರಿಚಯವಿಲ್ಲ ಎಂದು ಹೇಳಿದಾಗ ಆ ಮೂವರು ಪುಂಡರು ರಂಡೆ ಮೋನೆ, ನಂಗ ಎಂದ್ರೆ ಬೇನೆಂಗ್ ಆಕ್‌ಡಾ ನೀನಾರ್ʼʼ ಎಂದು ಹೇಳಿ ಮೂವರ ಪೈಕಿ ಸಿನಾನ್ ಅಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ಕುತ್ತಿಗೆಯ ಹಿಂಭಾಗ ಹಾಗೂ ಎರಡೂ ಕೈಗಳ ಮೊಣ ಕೈಗಳ ಭಾಗಕ್ಕೆ ಹೊಡೆದಿದ್ದು, ರಾಬಿ ಕಲ್ಲಿನಿಂದ ಹಿಂಬದಿಯ ಸೊಂಟಕ್ಕೆ ಮತ್ತು ಬೆನ್ನಿಗೆ ಗುದ್ದಿರುತ್ತಾನೆ ಹಾಗೂ ಶಿಯಾಬ್ ಯಾನೆ ಮೂಚಿ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಅಲ್ಲಿಗೆ ಬರುತ್ತಿದ್ದಂತೆ ಆ ಮೂವರು ʼʼನಿಂಡೆ ಕೊಲ್ಲಂಡೆ ಬುಡ್ಲೆ ʼʼ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.