ಬೆಂಗಳೂರು : ಲಿಂಗಧೀರನಹಳ್ಳಿ ಡಿ ಗ್ರೂಪ್ ಬಡಾವಣೆಯಲ್ಲಿ ನಿಲ್ಲಿಸಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್ನಲ್ಲಿ ಇದ್ದ ನಿರ್ವಾಹಕ ಮುತ್ತಯ್ಯ ಸ್ವಾಮಿ ಸಜೀವ ದಹನವಾಗಿದ್ದಾರೆ.
ಸೋಮನಹಳ್ಳಿ ಡಿಪೊ-31ಕ್ಕೆ ಸೇರಿದ್ದ ಬಸ್ನಲ್ಲಿ ಬಳ್ಳಾರಿಯ ಮುತ್ತಯ್ಯ ಹಾಗೂ ಚಾಲಕ ಪ್ರಕಾಶ್ ಕರ್ತವ್ಯದಲ್ಲಿದ್ದರು. ಗುರುವಾರ ರಾತ್ರಿ 10.30ಕ್ಕೆ ಕರ್ತವ್ಯ ಮುಗಿಸಿದ್ದ ಇಬ್ಬರು ಅಲ್ಲಿಯೇ ತಂಗಿದ್ದರು. ಚಾಲಕ, ನಿಲ್ದಾಣದಲ್ಲಿರುವ ಕೊಠಡಿಯಲ್ಲಿ ಮಲಗಿದ್ದ. ನಿರ್ವಾಹಕ ಮುತ್ತಯ್ಯ ಬಸ್ಸಿನಲ್ಲಿ ಮಲಗಿದ್ದರು.
ತಡರಾತ್ರಿ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ನಲ್ಲಿದ್ದ ಮುತ್ತಯ್ಯ ಮೃತಪಟ್ಟಿದ್ದು, ಅವರ ದೇಹವು ಸಂಪೂರ್ಣ ಸುಟ್ಟು ಹೋಗಿತ್ತು.
ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನು ತಿಳಿದು ಬಂದಿಲ್ಲ ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.