Thursday, November 28, 2024
ಸುದ್ದಿ

ಬಂಟ್ವಾಳ : 2023 ರ ವಿಧಾನಸಭಾ ಚುನಾವಣೆ ಹಿನ್ನೆಲೆ : ರೌಡಿಶೀಟರ್ ಇಬ್ರಾಹಿಂ ಖಲೀಲ್ ಗಡಿಪಾರಿಗೆ ಆದೇಶ – ಕಹಳೆ ನ್ಯೂಸ್

ಬಂಟ್ವಾಳ: ರೌಡಿಶೀಟರ್ , ಕೊಲೆ ಆರೋಪಿಯೋರ್ವನನ್ನು ದ.ಕ.ಜಿಲ್ಲಾಧಿಕಾರಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗಡಿಪಾರು ಅದೇಶ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಬಾಳ್ತಿಲ ನಿವಾಸಿ ಇಬ್ರಾಹಿಂ ಖಲೀಲ್ ಎಂಬಾತನನ್ನು ಗಡಿಪಾರಿಗೆ ಅದೇಶ ಮಾಡಲಾಗಿದೆ.
ಈತ ಇತ್ತೀಚಿಗೆ ಕಲ್ಲಡ್ಕ ನಿವಾಸಿ ರೌಡಿ ಶೀಟರ್ ಚೆನ್ನ ಫಾರೂಕ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು, ಇದರ ಜೊತೆಯಲ್ಲಿ ಕೊಲೆಯತ್ನ, ದೊಂಬಿ,ಹಲ್ಲೆ, ಹಲ್ಲೆ ಯತ್ನ, ಗಾಂಜ ಸಹಿತ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ.

ಈತನ ಬಗ್ಗೆ ಜಿಲ್ಲೆಯ ಅನೇಕ ಪೋಲೀಸ್ ಠಾಣೆ ಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದೆ.
2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅನಾಗರಿಕತೆಯ ಸಮಸ್ಯೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಈತನನ್ನು ಜಿಲ್ಲೆಯಿಂದ ಗಡಿಪಾರು ಅದೇಶ ಮಾಡಲಾಗಿದೆ