Recent Posts

Monday, January 20, 2025
ದಕ್ಷಿಣ ಕನ್ನಡಸಿನಿಮಾ

ತಮಿಳು ಸಿನಿ ಕ್ಷೇತ್ರದಲ್ಲಿ ಕಮಾಲ್ ಮಾಡ್ತಿದ್ದಾರೆ ಮಂಗಳೂರಿನ ಸುಂದರಿ ಬಹುಭಾಷಾ ನಟಿ ಆದ್ಯಾ ನಾಯಕ್ –ಕಹಳೆ ನ್ಯೂಸ್

ಮಂಗಳೂರು : ನಗುಮೊಗದ ಚೆಂದುಳ್ಳಿ ಚೆಲುವೆ..ತನ್ನ ನೋಟದಲ್ಲೆ ಎಲ್ಲರನ್ನ ಮೋಡಿ ಮಾಡೋ ಸುಂದರಿ ಆದ್ಯಾ ನಾಯಕ್. ಇದೀಗ ಆದ್ಯಾ ಸಿನಿ ಲೋಕದಲ್ಲಿ ಮಿಂಚುತ್ತಿದ್ದು ಅಪ್ಪಟ ಪ್ರತಿಭಾನ್ವಿತ ಬಹುಭಾಷಾ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನಿ ಲೋಕ ಅಂದ್ರೆನೇ ಹಾಗೇ ಒಂದು ಬಾರಿ ಎಲ್ಲರನ್ನ ಸೆಳೆದು ಬಿಡುತ್ತೆ. ಆದ್ರೆ ಈ ಕ್ಷೇತ್ರ ಕಲೆಯನ್ನ ಉಳಿಸಿ ಬೆಳೆಸುವ ಕಲಾವಿದರ ಕೈ ಹಿಡಿದು ಮುನ್ನಡೆಸುತ್ತಿದ್ದು, ಈ ಸಿನಿಜಗತ್ತಿನಲ್ಲಿ ನಮ್ಮ ಕರಾವಳಿಯ ಅನೇಕ ಪ್ರತಿಭೆಗಳಿದ್ದಾರೆ. ಈ ಸಾಲಿನಲ್ಲಿ ಆದ್ಯ ನಾಯಕ್ ಕೂಡ ಸೇರಿದ್ದು ಬಹುಭಾಷೆಗಳಲ್ಲಿ ಮುಂಚುತ್ತಿದ್ದಾರೆ. ಇದೀಗ ತಮಿಳು ವಿಜಿತೇಲು ಚಿತ್ರದಲ್ಲಿ ಆದ್ಯ ನಟಿಸಿ ಕ್ವೀನ್ ತಾರಾ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಮಿಳಿನ ವಿಜಿತೇಲು ಚಿತ್ರದಲ್ಲಿ ಆದ್ಯ ಡಬಲ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ಉತ್ತಮವಾಗಿ ಜೀವತುಂಬಿದ್ದಾರೆ. ಈ ಚಿತ್ರದಲ್ಲಿ ಇವರ ಅಭಿನಯಕ್ಕಾಗಿ ಕ್ವೀನ್ ತಾರಾ ಎಂದು ಪ್ರಸಿದ್ಧರಾಗಿದ್ದಾರೆ. ಜೊತೆಗೆ ಗಂಗಾವತಾರಂ ಎಂಬ ಕನ್ನಡ ಚಲನಚಿತ್ರದಲ್ಲಿ ನಟಿಸಿದ್ದು ಈ ಚಿತ್ರ ಸದ್ಯದಲ್ಲೆ ಬಿಡುಗಡೆಯಾಗಲಿದೆ.

ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಬಾಲಕೃಷ್ಣ ನಾಯಕ್-ಎಂ ಹಾಗೂ ಶ್ಯಾಮಲಾ ದಂಪತಿಯ ದ್ವಿತೀಯ ಪುತ್ರಿ ಆದ್ಯಾ ನಾಯಕ್.. ತನ್ನ ಸಣ್ಣ ವಯಸ್ಸಿನಲ್ಲೆ ಫ್ಯಾಶನ್ ಡಿಸೈನ್‌ನಿಂಗ್‌ನಲ್ಲಿ ಆಸಕ್ತಿಯೊಂದಿದ್ದ ಆದ್ಯಾ ಎಂಸಿಎ ಮಾಡಿ, ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಇಲ್ಲಿ ತಮ್ಮ ಕೈಚಳಕ ತೋರಿಸಿ, ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಪ್ರತಿಷ್ಠಿತ ಐಬಿಎಂನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಒಂದು ವರ್ಷ ಕೆಲಸ ಮಾಡಿದ್ದರು. ಸುಂದರಿ ಆದ್ಯಳನ್ನ ಕಂಡ ನಿರ್ದೇಶಕರೊಬ್ಬರು ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ರು..

ಆರಂಭದಲ್ಲಿ ಜ್ಯುವೆಲ್ಲರಿ ಸಂಸ್ಥೆಯೊಂದರ ಬ್ರಾಂಡ್‌ಗಾಗಿ ಮಾಡೆಲಿಂಗ್, ಸೀರೆ ಜಾಹೀರಾತು, ಸ್ವಚ್ಛ ಭಾರತ್ ಮಾಡೆಲ್, ನ್ಯಾಷನಲ್ ಬ್ರಾಂಡ್ ಮತ್ತು ಇಂಟರ್‌ನ್ಯಾಶನಲ್ ಬ್ರಾಂಡ್‌ಗಳ ಪ್ರಾಡಕ್ಟ್ ಜಾಹೀರಾತುಗಳಲ್ಲಿ ಕೆಲಸ ಮಾಡಿದ ಇವರು ಬಳಿಕ ಕನ್ನಡದಲ್ಲಿ ರತ್ನಗರ್ಭ, ಪಡ್ಡೆಹುಲಿ, ಒಂಬತ್ತನೇ ಅದ್ಬುತ, ಧಮಯಂತಿ, ನೋಟಗಾರ, ಬೀಗ, ಲಂಕೆ, ತಮಿಳಿನಲ್ಲಿ ಮೂಂಡ್ರಂ, ಅರಿವೆ, ಕ್ಯಾಲ, ಸ್ಕೆಚ್, ಮಲಯಾಳಂನಲ್ಲಿ ಇನ್‌ಸ್ಟಾಗ್ರಾಂ ಎಂಬ ಧಾರವಾಹಿ,’ಬಾಯೋ’ ಕೊಂಕಣಿ ಚಿತ್ರದಲ್ಲಿ ನಟಿಸಿದ್ದಾರೆ. ಹೀಗೆ ಕರಾವಳಿಯ ಕುವರಿ ಆದ್ಯಾ ಬಹುಭಾಷಾ ನಟಿಯಾಗಿ ಸಿನಿಮಾ, ಟಿವಿ ಧಾರವಾಹಿ, ಜಾಹೀರಾತುಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ನಮ್ಮ ಕುಡ್ಲದ ಬ್ಯೂಟಿ ಬಹುಭಾಷಾ ನಟಿಯಾಗಿ ಸಿನಿ ಕ್ಷೇತ್ರದಲ್ಲಿ ಕಮಾಲ್ ಮಾಡ್ತಾ ಇದ್ದು ಇವರ ಮುಂದಿನ ಸಿನೆಮಾಗಳಿಗೆ ಶುಭ ಹಾರೈಸೋಣ…