Sunday, January 19, 2025
ರಾಜಕೀಯ

Breaking News : ” ಉಳ್ಳಾಲ ಉಧ್ವಿಘ್ನ ” ಯು.ಟಿ.ಖಾದರ್‌ ಆಪ್ತನಿಗೆ ಸೋಲು ಕಿಡಿಗೇಡಿಗಳಿಂದ ಕಲ್ಲುತೂರಾಟ ; ಲಾಠಿ ಚಾರ್ಜ್‌ – ಕಹಳೆ ನ್ಯೂಸ್

ಉಳ್ಳಾಲ ,ಸೆ 3 : ಉಳ್ಳಾಲದ ನಗರ ಸಭೆ ಚುನಾವಣಾ ಫ‌ಲಿತಾಂಶ ಹೊರಬಿದ್ದಿದ್ದು. ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಅಂಗಡಿ ಹಾಗೂ ಇತರ ಹಲವರ ಅಂಗಡಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಸೆ ೩ ರ ಸೋಮವಾರ ನಡೆದಿದೆ.

ಉಳ್ಳಾಲದ ನಗರ ಸಭೆಯ 19 ನೇ ವಾರ್ಡ್‌ನಲ್ಲಿ ಸಚಿವ ಯು.ಟಿ.ಖಾದರ್‌ ಅವರೊಂದಿಗೆ ಗುರುತಿಸಿದ್ದ ಅವರ ಆಪ್ತ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಉಸ್ಮಾನ್‌ ಕಲ್ಲಾಪು ಅವರು ಪಕ್ಷೇತರ ಅಭ್ಯರ್ಥಿ ಮುಶ್ತಾಕ್‌ ಎದುರು ಸೋಲು ಕಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಫಲಿತಾಂಶ ಹೊರಬಿದ್ದ ಬಳಿಕ ಕಲ್ಲಾಪುವಿನಲ್ಲಿ ಅಹಿತಕರ ಘಟನೆ ನಡೆದಿದ್ದು,ಕಿಡಿಗೇಡಿಗಳು ಅಂಗಡಿಗಳ ಮೇಲೆ ಕಲ್ಲು ತೂರಿದ್ದಾರೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.