‘ಡೇರ್’ ಆಟವೆಂದು ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಊಟಿ ಪುರಸಭೆಯಿಂದ ನಡೆಸಲ್ಪಡುವ ಉರ್ದು ಮಾಧ್ಯಮಿಕ ಶಾಲೆಯಲ್ಲಿ ಪೌಷ್ಠಿಕಾಂಶ ಯೋಜನೆಯ ಅಂಗವಾಗಿ ಸರ್ಕಾರಿ ಆರೋಗ್ಯ ಇಲಾಖೆ ವಿದ್ಯಾರ್ಥಿಗಳು ಪ್ರತಿದಿನ ಒಂದು ಮಾತ್ರೆ ಸೇವಿಸಬೇಕೆಂದು, ಎರಡು ತಿಂಗಳ ಕಾಲ 50ಮಾತ್ರೆಗಳ ಬ್ಯಾಚ್ ನೀಡಲಾಗಿತ್ತು. ನೀಡಿದ ಕಬ್ಬಿಣಾಂಶ ಮತ್ತು ಪೌಷ್ಟಿಕಾಂಶದ ಮಾತ್ರೆಗಳನ್ನು ಯಾರು ಹೆಚ್ಚು ತಿನ್ನಬಹುದು ಎಂದು ಮಾರ್ಚ್ 6 ರಂದು 8 ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ‘ಡೇರ್’ ಆಟ ಆಡಿದ್ದಾರೆ. ಹಲವಾರು ಮಾತ್ರೆಗಳನ್ನು ಸೇವಿಸಿದ ನಂತರ ವಿದ್ಯಾರ್ಥಿಗಳು ತರಗತಿಯಲ್ಲಿ ಅಸ್ವಸ್ಥಗೊಂಡರು. ಈ ವಿದ್ಯಾರ್ಥಿಗಳನ್ನು ಕೊಯಮತ್ತೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪೈಕಿ ಜೈನಬಾ ಫಾತಿಮಾ (13) ಎಂಬ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇನ್ನುಳಿದ ಮೂವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಲಿವರ್ ತೀವ್ರವಾಗಿ ಹಾನಿಗೊಳಗಾದ ಒಬ್ಬ ವಿದ್ಯಾರ್ಥಿನಿ ಐಸಿಯು ಘಟಕದಲ್ಲಿದ್ದಾರೆ.
ಬಾಲಕಿ ಅತಿಯಾದ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿದ ಕಾರಣ ಸಾವನ್ನಪ್ಪಿದ್ದಾಳೆ. ಸಪ್ಲಿಮೆಂಟ್‌ನ ಅತಿಯಾದ ಸೇವನೆಯಿಂದ ಲಿವರ್ ವೈಫಲ್ಯವಾಗಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸಿದಾಗ ಮೃತ 8ನೇ ತರಗತಿಯ ವಿದ್ಯಾರ್ಥಿನಿ ಸುಮಾರು 45 ಮಾತ್ರೆಗಳನ್ನು ಸೇವಿಸಿದ್ದಾಳೆ. ಇತರರು 10-20 ಮಾತ್ರೆಗಳನ್ನು ನುಂಗಿದ್ದಾರೆ ಎಂದು ತಿಳಿಸಿದರು.
ಮುನ್ಸಿಪಲ್ ಶಾಲೆಯ ಮುಖ್ಯೋಪಾಧ್ಯಾಯ ಮೊಹಮ್ಮದ್ ಅಮೀನ್ ಮತ್ತು ಮಾತ್ರೆ ವಿತರಣೆಯ ಮೇಲ್ವಿಚಾರಕ ಕಲೈವಾಣಿ ಮತ್ತು ಶಾಲೆಯ ಶಿಕ್ಷಕಿಯನ್ನು ಜಿಲ್ಲಾ ಶಿಕ್ಷಣಾಧಿಕಾರಿ ಅಮಾನತುಗೊಳಿಸಿದ್ದಾರೆ. ಘಟನೆ ನಡೆದ ದಿನ ಶಿಕ್ಷಕಿ ಕಲೈವಾಣಿ ಶಾಲೆಗೆ ಬಾರದೇ ಇದ್ದ ಕಾರಣ ಅವರ ಮೇಜಿನ ಮೇಲಿದ್ದ ಮಾತ್ರೆಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳು ತಿಂದಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
You Might Also Like
ಕೋಟೆಕಾರು ಬ್ಯಾಂಕ್ ದರೋಡೆ : ದರೋಡೆ ಮಾಡಿದ್ದ 14 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಿದ ಮಂಗಳೂರು ಪೊಲೀಸರು – ಕಹಳೆ ನ್ಯೂಸ್
ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 4 ಮಂದಿ ದರೋಡೆಕೋರರನ್ನು ಅರೆಸ್ಟ್ ಮಾಡಿ ಅವರಿಂದ ಬ್ಯಾಂಕ್ ನಿಂದ ದರೋಡೆ ಮಾಡಿದ್ದ...
ಬೆಂಗಳೂರಿನ ‘ಎಲೆಕ್ಟ್ರಿಕ್ ಬೈಕ್’ ಶೋರೂಂ ನಲ್ಲಿ ಅಗ್ನಿ ಅವಘಡ : 30 ಕ್ಕೂ ಹೆಚ್ಚು ಸ್ಕೂಟರ್’ಗಳು ಸುಟ್ಟು ಕರಕಲು.! -ಕಹಳೆ ನ್ಯೂಸ್
ಬೆಂಗಳೂರು : ಬೆಂಗಳೂರಿನ ಬೈಕ್ ಶೋಂ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 30 ಕ್ಕೂ ಬೈಕ್ ಗಳು ಬೈಕ್ ಗಳು ಸುಟ್ಟು ಕರಕಲಾಗಿದೆ ಎಂದು ಹೇಳಲಾಗುತ್ತಿದೆ. ರಾಜಾಜಿನಗರದ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚಯರ್ ಹಸ್ತಾಂತರ-ಕಹಳೆ ನ್ಯೂಸ್
ಬಂಟ್ವಾಳ ತಾಲೂಕು, ಮಾಣಿಲ ಗ್ರಾಮದ ಒಟೆಪಡ್ಪು ವಾಸು ನಾಯ್ಕರವರು ನಡೆದಾಡಲು ಅಶಕ್ತರಾಗಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದ ಯೋಜನೆಯಡಿಯಲ್ಲಿ ವೀಲ್ ಚಯರನ್ನು....
ಉಡುಪಿಯ ಶಾರದಾ ವಸತಿ ಶಾಲೆಗೆ `ಬಾಂಬ್’ ಬೆದರಿಕೆ ಇ-ಮೇಲ್ : ಸ್ಥಳಕ್ಕೆ ಪೊಲೀಸರು ದೌಡು-ಕಹಳೆ ನ್ಯೂಸ್
ಉಡುಪಿ : ಉಡುಪಿಯ ಶಾರದಾ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದ್ದು, ಶಾಲೆಗೆ ಬಾಂಬ್ ಪತ್ತೆ ದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಡುಪಿಯ ಶಾರದಾ...