Friday, January 24, 2025
ಸುದ್ದಿ

ಕಾಮಿಡಿ ವಿತ್ ಕಪಿಲ್’ ಶೋಗೆ ನರೇಂದ್ರ ಮೋದಿಗೆ ಆಹ್ವಾನ..? : ನೇರ ಆಹ್ವಾನಕ್ಕೆ ಮೋದಿ ಏನ್ ಹೇಳಿದ್ರು ಗೊತ್ತಾ..? – ಕಹಳೆ ನ್ಯೂಸ್

ಬಾಲಿವುಡ್‌ನ ಜನಪ್ರಿಯ ಕಾಮಿಡಿ ಶೋ ‘ಕಾಮಿಡಿ ವಿತ್ ಕಪಿಲ್’ ಶೋಗೆ ಸದ್ಯದಲ್ಲೇ ನರೇಂದ್ರ ಮೋದಿ ಬರಲಿದ್ದಾರೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಕಾರ್ಯಕ್ರಮವನ್ನ ನಡೆಸಿ ಕೊಡ್ತಾ ಇಒರೋ ಆ್ಯಂಕರ್ ಕಪಿಲ್ ಶರ್ಮಾ ಕೂಡ ಮಾತನಾಡಿದ್ದಾರೆ.
ಹಿ0ದಿಯಲ್ಲಿ ಪ್ರಸಾರವಾಗುತ್ತಿರುವ ‘ಕಾಮಿಡಿ ವಿತ್ ಕಪಿಲ್’ ಶೋಗೆ ಅನೇಕ ಸೆಲೆಬ್ರಿಟಿಗಳು, ಹಾಗೂ ವಿವಿಧ ಕ್ಷೇತ್ರದ ಸಾಧಕರು ಬಂದು ಸಂದರ್ಶನ ನೀಡಿದ್ದಾರೆ. ಜೊತೆಗೆ ಸಂಪೂರ್ಣ ಕಾಮಿಡಿಯಿಂದ ಕೂಡಿರುವ ಈ ಕಾರ್ಯಕ್ರಮ ಎಂತವರನ್ನೂ ಸಹ ನಗೆ ಕಡಲಲ್ಲಿ ತೇಲಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯವರು ‘ಕಾಮಿಡಿ ವಿತ್ ಕಪಿಲ್’ ಕಾರ್ಯಕ್ರಮಲದಲಿ ಭಾಗಿಯಾಗುತ್ತಾರೆ ಅನ್ನೋ ಸುದ್ದಿ ಇದೆ. ಈ ಕಾರ್ಯಕ್ರಮಕೆ ನಮೋ ಅವರನ್ನ ಕರೆಯಬೇಕು ಅನ್ನೋ ಆದೆ ಕಪಿಲ್ ಶರ್ಮಾ ಅವರಿತ್ತು. ಹೀಗಾಗಿ ಮೋದಿಯವರನ್ನ ಭೇಟಿಯಾಗಿದ್ದಾಗ ಕಪಿಲ್ ತಮ್ಮೊಳಗಿದ್ದ ಪ್ರಶ್ನೆಯನ್ನು ಕೇಳಿಯೇ ಬಿಟ್ಟಿದ್ದರು. ಜೊತೆಗೆ ಕಾಮಿಡಿ ವಿತ್ ಕಪಿಲ್ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ ಇದಕ್ಕೆ ನಮ್ಮ ಮೋದಿ ಏನ್ ಹೇಳಿದ್ದಾರೆ ಗೊತ್ತಾ…? ಈ ಬಗ್ಗೆ ಕಪಿಲ್ ಶರ್ಮ ಅವರೇ ಹೇಳಿಕೊಂಡಿದ್ದಾರೆ.

‘‘ನಾನು ಮೋದಿಯವರನ್ನ ಭೇಟಿಯಾಗಿದ್ದಾಗ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಆದರೆ ಅವರು ತಕ್ಷಣಕ್ಕೆ ಇಲ್ಲವೇ ಇಲ್ಲ ಎಂದು ಹೇಳಲಿಲ್ಲ. ಸದ್ಯ ನಮ್ಮ ವಿರೋಧ ಪಕ್ಷದವರು ಚೆನ್ನಾಗಿ ಕಾಮಿಡಿ ಮಾಡುತ್ತಿದ್ದಾರೆ, ನೋಡೋಣ’’ ಎಂದು ಹೇಳಿದ್ದಾರೆ.
‘ಕಾಮಿಡಿ ವಿತ್ ಕಪಿಲ್’ ಕಾರ್ಮಕ್ರಮಕ್ಕೆ ಮೋದಿ ರ‍್ತಾರ ಇಲ್ವಾ ಅನ್ನೋದನ್ನ ಕಾದುನೋಡಬೇಕಾಗಿದೆ.